ಕೃಷ್ಣಾ ಬಿ ಸ್ಕೀಂ ಕಾಮಗಾರಿ ಪೂರ್ಣಗೊಳಿಸಿ

Untitled design (4)
ತಾವರಗೇರಾದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಕಂದಾಯ ನಿರೀಕ್ಷಕ ಶರಣಪ್ಪ ದಾಸರಗೆ ಶುಕ್ರವಾರ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಸಾಗರ ಬೇರಿ, ಅಮರೇಶ , ನಾರಾಯಣಸಿಂಗ್, ನಾಗರಾಜ ಇದ್ದರು.
Published on

ತಾವರಗೇರಾ: ಕೃಷ್ಣಾ ಬಿ ಸ್ಕೀಂ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಕಂದಾಯ ನಿರೀಕ್ಷಕ ಶರಣಪ್ಪ ದಾಸರಗೆ ಶುಕ್ರವಾರ ಮನವಿ ಸಲ್ಲಿಸಿದರು.


ಬರ ಆವರಿಸುವುದರಿಂದ ಬೆಳೆಗಳು ಒಣಗಿ ಹೋಗುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೃಷ್ಣಾ ಬಿ ಸ್ಕೀಂ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಪದಾಧಿಕಾರಿಗಳಾದ ಸಾಗರ ಬೇರಿ, ನಾಗರಾಜ ನಂದಾಪೂರು, ನಾರಾಯಣಸಿಂಗ್ ಗುಡಸಲಿ, ಅಮರೇಶ, ಪ್ರಕಾಶರಾವ್ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net