ತಲಕಾವೇರಿ ಭಾಗಮಂಡಲ ಜೀರ್ಣೋದ್ಧಾರ

Krishna
Published on

ಮಡಿಕೇರಿ

ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದ ಜೀಣೋದ್ಧಾರಕ್ಕೆ ಎಸ್.ಎಂ. ಕೃಷ್ಣ ಕೊಡುಗೆ ಮಹತ್ತರವಾಗಿದೆ. ಶ್ರೀ ಕ್ಷೇತ್ರಗಳ ಅಭಿವೃದ್ಧಿಗೆ ಜೀರ್ಣೋದ್ಧಾರ ಸಮಿತಿ ಮುಂದಾದಾಗ ಅಂದಿನ ಸ್ಥಿತಿಯಲ್ಲಿ ಕೊಡಗಿನಲ್ಲಿ ಭಾರೀ ಮೊತ್ತದ ಹಣ ಸಂಗ್ರಹಿಸಿ ಜೀರ್ಣೋದ್ಧಾರ ಕಾರ್ಯ ನಡೆಸುವುದು ಅತ್ಯಂತ ಕಷ್ಟದ ಕೆಲಸ ಎನ್ನುವ ವಿಷಯ ಮನವರಿಕೆ ಆಗುತ್ತದೆ. ಹಾಗಾಗಿ ಸÀರ್ಕಾರವೇ ಜೀರ್ಣೋದ್ಧಾರ ಕಾರ್ಯ ನಡೆಸಲು ಮನವಿ ಮಾಡುವಂತೆ ನಿರ್ಧರಿಸಲಾಯಿತು. ಆಗ ಮುಜರಾಯಿ ಸಚಿವೆ ಆಗಿದ್ದ ಅಂದಿನ ವಿರಾಜಪೇಟೆ ಶಾಸಕಿ ಸುಮಾ ವಸಂತ್ ಅವರಲ್ಲಿ ಈ ಸಂಬAಧ ಮನವಿ ಮಾಡಿ ಸÀರ್ಕಾರವೇ ಜೀರ್ಣೋದ್ಧಾರ ಮಾಡುವ ಬಗ್ಗೆ ಕೋರಿಕೆ ಇಡಲಾಯಿತು. ಆಗ ಎಂ.ಎA. ನಾಣಯ್ಯ ಮತ್ತು ಟಿ. ಜಾನ್ ಅವರುಗಳೂ ಸಚಿವರುಗಳಾಗಿದ್ದರು. ಈ ಮೂವರು ಸಚಿವರ ನೇತೃತ್ವದಲ್ಲಿ ಮಾಜಿ ಸಚಿವ ಎಂ. ಸಿ. ನಾಣಯ್ಯ ಮುಂದಾಳತ್ವದಲ್ಲಿ ಜೀರ್ಣೋದ್ಧಾರ ಸಮಿತಿಯ ನಿಯೋಗ ಬೆಂಗಳೂರಿಗೆ ತೆರಳಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿತು. ಆ ಸಂದರ್ಭ ಸಮಿತಿಯ ಪರವಾಗಿ ಎಂ. ಸಿ. ನಾಣಯ್ಯ ಅವರು ಕರ್ನಾಟಕ ಮತ್ತು ದೇಶದಲ್ಲಿ ಕಾವೇರಿ ನದಿಯ ಮಹತ್ವದ ಕುರಿತು ಕೃಷ್ಣ ಅವರಿಗೆ ವಿವರವಾಗಿ ಮಾಹಿತಿ ನೀಡಿದ್ದರು. ಮಳೆಗಾಲದಲ್ಲಿ ಕೊಡಗಿನ ಜನರು ಸಂಕಷ್ಟ ಅನುಭವಿಸುತ್ತಾರೆ. ಆದರೆ, ಕಾವೇರಿ ಮೂಲಕ ರಾಜ್ಯಕ್ಕೆ, ಇತರ ರಾಜ್ಯಗಳಿಗೆ ಅತ್ಯಧಿಕ ಪ್ರಯೋಜನವಿದೆ, ಕಾವೇರಿಯ ಉಗಮ ಸ್ಥಾನ ಹಾಗೂ ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರವನ್ನು ಸÀರ್ಕಾರವೇ ತೆಗೆದುಕೊಳ್ಳಬೇಕಾದ ಜವಾಬ್ದಾರಿ ಬಗ್ಗೆ ಗಮನಕ್ಕೆ ತಂದರು. ತಕ್ಷಣವೇ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಂದಾಜು ೧೭ ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಿಗೆ ಕೊಟ್ಟು ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ಕಾವೇರಿ ನೀರಾವರಿ ನಿಗಮಕ್ಕೆ ಒಪ್ಪಿಸಿದ್ದರು. ಅಂದು ಜಿ.ಪಂ. ಅಧ್ಯಕ್ಷೆ ಆಗಿದ್ದ ಕೆ.ಪಿ. ಚಂದ್ರಕಲಾ ಅವರೂ ಇಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದರು. ಹೀಗೆ ಅಂದು ಶ್ರೀ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲದ ಅಭಿವೃದ್ಧಿಗೆ ಎಸ್.ಎಂ. ಕೃಷ್ಣ ನೀಡಿದ್ದ ಕೊಡುಗೆಯನ್ನು ಕೊಡಗಿನವರೂ ಸದಾ ಸ್ಮರಿಸಿಕೊಳ್ಳುತ್ತಾರೆ.

ಕೊಡಗಿನ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ವೇಳೆ ಕೊಡಗಿನ ಮೂವರು ಸಚಿವ ಸ್ಥಾನ ಪಡೆದುಕೊಂಡಿದ್ದರು. ಮುಜರಾಯಿ ಮಂತ್ರಿಯಾಗಿ ವಿರಾಜಪೇಟೆಯ ಅಂದಿನ ಶಾಸಕಿ ಸುಮಾ ವಸಂತ್, ಅಬಕಾರಿ ಮಂತ್ರಿಯಾಗಿ ಮಡಿಕೇರಿಯ ಅಂದಿನ ಶಾಸಕ ಎಂ.ಎA. ನಾಣಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಜಾನ್ ನಾಗರಿಕ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಎಸ್.ಎಂ. ಕೃಷ್ಣ ಅವರು ಕೊಡಗು ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ತಲಕಾವೇರಿ ಅಭಿವೃದ್ಧಿಗೆ ಬಹು ದೊಡ್ಡ ಕೊಡುಗೆ ನೀಡಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಡಗು ಜಿಲ್ಲೆಯ ಮೂವರನ್ನು ತಮ್ಮ ಮಂತ್ರಿಮAಡಲದಲ್ಲಿ ಮಂತ್ರಿಗಳನ್ನಾಗಿ ಮಾಡಿ ಜಿಲ್ಲೆಗೆ ವಿಶೇಷ ಪ್ರಾತಿನಿಧ್ಯ ನೀಡಿದ್ದರು.

ಕೆ.ಪಿ. ಚಂದ್ರಕಲಾ, ಮಾಜಿ ಅಧ್ಯಕ್ಷೆ, ಕೊಡಗು ಜಿ.ಪಂ. ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net