ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ ಆ. 26ರಿಂದ ಎರಡು ದಿನಗಳವರೆಗೆ ಶ್ರೀಕೃಷ್ಣ ಜಯಂತಿ ಹಾಗೂ ಕೃಷ್ಣ ಲೀಲೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ಆ. 26ರಂದು ಬೆಳಗ್ಗೆ ಶ್ರೀಕೃಷ್ಣ ದೇವರಿಗೆ ವಿಶೇಷ ಪೂಜೆ, ರಾತ್ರಿ ಚಂದ್ರೋದಯ 12.06ಕ್ಕೆ ಆ್ಯಘ್ಯ ಪ್ರಧಾನ ನಡೆಯಲಿದೆ.
ಆ. 27ರಂದು ಸಂಜೆ 5ಕ್ಕೆ ಶ್ರೀ ಕೃಷ್ಣ ಲೀಲೋತ್ಸವದ ಮೆರವಣಿಗೆಯು ಶ್ರೀಕೃಷ್ಣ ಕಲ್ಯಾಣ ಮಂಟಪದಿಂದ ಹೊರಟು ಬಾಳಿಗಾ ಕ್ರಾಸ್ ತಲುಪಿ ವೇರ್ಣೇಕರ ಪ್ಲಾಜಾ ಎದುರಿನ ಮಾರ್ಗವಾಗಿ ವಾಪಸ್ ಮಂಟಪಕ್ಕೆ ಬರಲಿದೆ.
ಮಹನೀಯರಿಗೆ ಸನ್ಮಾನ, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.