ಜಿಕೆವಿಕೆಯಲ್ಲಿ ಜುಲೈ 27ರಂದು ‘ಕೃಷಿ ಸಂತೆ’

gkvk
Published on

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕಾರ್ಯಚಟುವಟಿಕೆ ಹಾಗೂ ಸಂಸ್ಥೆ ರೂಪಿಸಿರುವ ಉತ್ನನ್ನಗಳ ಕುರಿತು ರೈತರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ‘ರೈತ ಸಂತೆ’ ಕಾರ್ಯಕ್ರಮ ಶನಿವಾರ (ಜು.27) ವಿವಿ ಕ್ಯಾಂಪಸ್ ಜಿಕೆವಿಕೆಯ ಗಣಪತಿ ದೇಗುಲ ಬಳಿ ನಡೆಯಲಿದೆ.

ರೈತ ಸಂತೆಯಲ್ಲಿ ವಿವಿ ಸಂಶೋಧಿಸಿರುವ ವಿವಿಧ ಬೆಳೆ ತಳಿಗಳು, ಬಿತ್ತನೆ ಬೀಜ, ತರಕಾರಿ ಬೀಜಗಳ ಪ್ಯಾಕೆಟ್, ತೋಟಗಾರಿಕೆ-ಸುಗಂಧ ಮತ್ತು ಔಷಧೀಯ ಸಸ್ಯಗಳು, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನ, ಜೈವಿಕ ಗೊಬ್ಬರ, ಕೃಷಿ ಯಂತ್ರೋಪಕರಣ, ಎರೆಗೊಬ್ಬರ, ರೇಷ್ಮೆಗೂಡಿನ ಕರಕುಶಲ ಉತ್ಪನ್ನಗಳು, ಕೈಯಿಂದ ತಯಾರಿಸಿದ ಪರಿಮಳಯುಕ್ತ ಸಾಬೂನು ಮತ್ತು ಮುಖದ ಕ್ರೀಮ್, ವಿವಿಯ ಬೇಕರಿ ಉತ್ಪನ್ನಗಳು, ಅಣಬೆ, ಅರಿಶಿನ, ಹುಣಸೆ, ತೆಂಗಿನಕಾಯಿ ಇತ್ಯಾದಿ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಕೃಷಿ ವಿವಿಯ ಉತ್ಪನ್ನಗಳನ್ನು ದೊಡ್ಡೆ ಪ್ರಮಾಣದಲ್ಲಿ ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಕಳೆದ ತಿಂಗಳಿನಿಂದ 4ನೇ ಶನಿವಾರ ರೈತ ಸಂತೆ ನಡೆಸಲು ತೀರ್ಮಾನಿಸಲಾಗಿದೆ ಎಂದು ವಿವಿಯ ವಿಸ್ತರಣಾ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net