ಕೃಷಿಗೆ ಪ್ರೋತ್ಸಾಹ ಅಗತ್ಯ: ಪುತ್ತಿಗೆ ಶ್ರೀ

udp-1-krishi 1
Published on

ಉಡುಪಿ: ಇಂದಿನ ಕಾಲದಲ್ಲಿ ಕೃಷಿಯಿಂದ ಮುಕ್ತರಾಗಿ ಜೀವನ ನಡೆಸುತ್ತಿರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೃಷಿ ಕಡೆಗೆ ಗಮನ ಹರಿಸಿದಾಗ ಬ್ರಾಹ್ಮಣ್ಯದ ರಕ್ಷಣೆಯೂ ಸಾಧ್ಯವಿದೆ. ಕೃಷಿಗೆ ಉತ್ತೇಜನ ನೀಡುವ ಬ್ರಾಹ್ಮಣ ಸಂದ ಕಾರ್ಯ ಪ್ರಶಂಸನೀಯ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ರಜತಮಹೋತ್ಸವ ಅಂಗವಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ರೋಟರಿ ಐಸಿರಿ, ಪರ್ಕಳ ಸಹಭಾಗಿತ್ವದೊಂದಿಗೆ ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ನಡೆದ ಕೃಷಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕೃಷ್ಣನ ಕ್ಷೇತ್ರದಲ್ಲಿ ಕೃಷಿ ಸಮ್ಮೇಳನ ನಡೆಯುತ್ತಿರುವುದು ಬಹಳ ಅರ್ಥಪೂರ್ಣ. ಕೃಷ್ಣ ಪರಿಸರ ಪ್ರೇಮಿಯಾಗಿದ್ದು, ಪರಿಸರ ಸಂರಕ್ಷಣಗೆ ಕೃಷ್ಣನ ಮುಖ್ಯ ಸಂದೇಶವಾಗಿದೆ ಎಂದರು.

ಅಧ್ಯಕ್ಷತೆಯನ್ನು ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಿವಾನ್​ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ನಗರಸಭಾ ಸದಸ್ಯ ಕೃಷ್ಣ ಕೊಡಂಚ, ಉಡುಪಿ ಟೌನ್​ ಬ್ಯಾಂಕ್​ ಅಧ್ಯಕ್ಷ ಕೆ. ಜಯಪ್ರಕಾಶ್​ ಕೆದ್ಲಾಯ, ಜಿಲ್ಲಾ ಕೃಷಿಕ ಸಂದ ಅಧ್ಯಕ್ಷ ರಾಮಕೃಷ್ಣ ಶರ್ಮ, ಪರ್ಕಳ ರೋಟರಿ ಕ್ಲಬ್​ ಅಧ್ಯೆ ಸ್ಮಿತಾ ಕಾಮತ್​, ಶ್ರೀಕಾಂತ್​ ಉಪಾಧ್ಯಾಯ , ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್​ ಮಂಜ ಮೊದಲಾದವರು ಉಪಸ್ಥಿತರಿದ್ದರು. ರಜತ ಮಹೋತ್ಸವದ ಅಧ್ಯಕ್ಷ ಶ್ರೀನಿವಾಸ ಬಲ್ಲಾಳ್​ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿ ಸಾಧಕರಾದ ಮಾಧವ ಭಟ್​ ತೋನ್ಸೆ, ಶ್ರೀನಿವಾಸ ಆಚಾರ್ಯ ಬೈಲೂರು, ಶ್ರೀಪತಿ ಭಟ್​ ಕರಂಬಳ್ಳಿ, ಶ್ರೀಕಾಂತ್​ ಆಚಾರ್ಯ ಪಡುಬಿದ್ರಿ, ಡಾ. ಪ್ರಜ್ಞಾ ಮಾರ್ಪಳ್ಳಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net