

ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ
ನಾರಾಯಣ ಗುರುಗಳು ಜನರ ಮನಸ್ಸಿನಲ್ಲಿ ಜ್ಞಾನದ ಬಿತ್ತನೆ ಮಾಡುವ ಮೂಲಕ ಸಂಘಟಿತರನ್ನಾಗಿಸಿ ಬೆಳೆಸಿದರು ಎಂದು ಹಿರಿಯ ಜನಪದ ವಿದ್ವಾಂಸ ಡಾ.ವೈ.ಎನ್ ಶೆಟ್ಟಿ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯ, ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ, ಮಂಗಳಗಂಗೋತ್ರಿ ಸಹಯೋಗದಲ್ಲಿ ಪಾವಂಜೆಯ ನಿನಾದ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಅಶ್ರಯದಲ್ಲಿ ಆಯೋಜನೆಗೊಂಡ ಕೃಷಿ ನಿನಾದ ನೇಗಿಲ ಯೋಗ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅದ್ವೈತ ಸಿದ್ಧಾಂತ ಅತ್ಮವೇ ಪರಮಾತ್ಮ ಎಂಬ ನಂಬಿಕೆಯಿಂದ ತಾವು ಸ್ಥಾಪಿಸಿದ ದೇವಸ್ಥಾನಲ್ಲಿ ಮೂರ್ತಿಯ ಬದಲಿಗೆ ಕನ್ನಡಿ ಮುಂದೆ ದೀಪ ಇಟ್ಟು ಪ್ರತಿಯೊಬ್ಬನಲ್ಲೂ ದೇವರಿದ್ದಾರೆ ಎಂಬ ಸಿದ್ದಾಂತ ಪ್ರತಿಪಾದಿಸಿದವರು ನಾರಾಯಣ ಗುರುಗಳು ಎಂದು ಹೇಳಿದರು.
ನೇಗಿಲ ಯೋಗ ಕಾರ್ಯಕ್ರಮದಡಿ ಕೃಷಿ ಮಾಹಿತಿ ಜತೆಗೆ ವಿದ್ಯಾರ್ಥಿಗಳಿಗೆ ನಾಟಿ ಗದ್ದೆಯಲ್ಲಿ ಕಳೆ ತೆಗೆಯುವ ಕಾರ್ಯ ಅಭ್ಯಸಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯ ಶ್ರೀನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ.ಜಯರಾಜ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ, ಕಾಟಿಪಳ್ಳ ನಾರಾಯಣಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಯಾಕರ್, ಯಾದವ ದೇವಡಿಗ, ಮೂಲ್ಕಿ ನಾರಾಯಣಗುರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಾಲಚಂದ್ರ ಸನಿಲ್, ಮೆಸ್ಕಾಂನ ಯಶೋಧರ ಸಾಲಿಯಾನ್ ಹಳೆಯಂಗಡಿ, ವಸಂತಿ ದೇವಡಿಗ ಉಪಸ್ಥಿತರಿದ್ದರು.
ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು. ಜಯಂತಿ ಸಂಕಮಾರ್ ವಂದಿಸಿದರು. ಭವ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.