VIDEO| ಮೈಸೂರಿನಲ್ಲಿ ಕೃಷಿಮೇಳಕ್ಕೆ ಮುಖ್ಯಮಂತ್ರಿ ಬಿಎಸ್​ವೈ, ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಚಾಲನೆ

KRISHI MELA
Published on

ಮೈಸೂರು: ಮಹಾರಾಜ ಕಾಲೇಜಿನಲ್ಲಿ ವಿಜಯವಾಣಿ, ದಿಗ್ವಿಜಯ 24x7 ನ್ಯೂಸ್ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳಕ್ಕೆ ಹೊಂಬಾಳೆ ಬಿಡಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಕಾರ್ಯಕ್ರಮ ಉದ್ಘಾಟನೆಗೆ ವೇದಿಕೆಯಲ್ಲಿ ಆಸೀನರಿದ್ದ ಅತಿಥಿಗಳು ಸಾಥ್ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಗೆ ಅರಳಿ ಸಸಿಗೆ ನೀರೆರೆದ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ, ಇಂತಹ ಮೇಳಗಳು ಆಗೋದರಿಂದ ರೈತರಿಗೆ ಅನುಕೂಲ ಆಗುತ್ತದೆ. ಮೂರು ದಿನಗಳ ಕಾಲ ಕೃಷಿ ತಜ್ಞರಿಂದ ಮಾಹಿತಿ ಸಿಗಲಿದೆ. ಭೂಮಿ ತಾಯಿ ಎಂದೆಂದೂ ಕೈ ಬಿಡಲ್ಲ. ಭೂಮಿ ತಾಯಿಯ ನಂಬಿ ಕೆಲಸ ಮಾಡಿದರೆ ಯಶಸ್ಸು ಸಿಗಲಿದೆ. ಅನ್ನ ನೀಡುವುದು ಪುಣ್ಯದ ಕೆಲಸ ಎಂದರು.

ವಿಜಯವಾಣಿ ಪತ್ರಿಕೆ ಓದುಗರಿಗೆ ವಿಶೇಷತೆ ನಿಡುವುದು ನಮ್ಮ ಉದ್ದೇಶ. ನಾನು ರೈತನಲ್ಲದಿದ್ದರು ಸಾವಿರಾರು ರೈತರ ಸಂಪರ್ಕದಲ್ಲಿದ್ದೇನೆ. ರೈತರನ್ನು ಟೀಕೆ ಮಾಡಿದವರು ಇಂದು ಪ್ರೋತ್ಸಾಹ ಮಾಡುತ್ತಿದ್ದಾರೆ. ವಿಶ್ವಕ್ಕೆ ಉತ್ತಮವಾದ ಆಹಾರವನ್ನು ಪೂರೈಕೆ ಮಾಡುವುದು ರೈತರಿಂದ ಮಾತ್ರ ಸಾಧ್ಯ. ಆತ್ಮಹತ್ಯೆಗೆ ಯಾರು ಒಳಗಾಗಬೇಡಿ ಎಂದು ರೈತರಿಗೆ ಆತ್ಮಸ್ಥೈರ್ಯ ತುಂಬಿದರು.

ದಿಗ್ವಿಜಯ ಟಿವಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ವಿಚಾರಗೋಷ್ಠಿ ಆಯೋಜಿಸಲು ಸೂಚಿಸಿದ್ದೇನೆ. ಕೃಷಿ ಒಂದು ಉದ್ದಿಮೆಯಾದರೆ ಜಗತ್ತನ್ನು ಗೆಲ್ಲಬಹುದು ಎಂದರು.

ವಿಜಯವಾಣಿ ಹೊರ ತಂದಿರುವ ವಿಶೇಷ ಪುರವಣಿ ಬಿಡುಗಡೆ ಮಾಡಲಾಯಿತು. ಕೃಷಿಗೆ ಸಂಬಂಧಿಸಿದ ಮಾಹಿತಿಯುಳ್ಳ ಮಾಹಿತಿ ಹೊಂದಿರುವ ಪುರವಣಿಯನ್ನು ಸಚಿವ ವಿ. ಸೋಮಣ್ಣರಿಂದ ಬಿಡುಗಡೆ ಮಾಡಿದರು.

ರೈತರ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಗೌರವವಿದೆ. ಫಸಲ್ ಭೀಮ್ ಯೋಚನೆಯಡಿ ರಾಜ್ಯ ಸರ್ಕಾರ 4 ಸಾವಿರ ನೀಡುತ್ತಿದೆ. ರೈತರು ಹೆದರದೇ ಧೈರ್ಯದಿಂದ ಬದುಕಬೇಕು. ಕಷ್ಟಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಹಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ರೈತರ ಪರವಾದ ಬಜೆಟ್ ಮಂಡನೆ ಮಾಡಲು ಚಿಂತನೆ ಮಾಡಲಾಗಿದೆ. ಬಜೆಟ್​ನಲ್ಲಿ ಹೆಚ್ಚಿನ ಪಾಲು ರೈತರಿಗೆ ನೀಡಲು ಸಿಎಂ ಚಿಂತಿಸಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net