ಕೆಆರ್‌ಇಡಿಎಲ್ ನಿಗಮ ಲಾಭದಾಯಕ

rajegowda TD
ಟಿ.ಡಿ.ರಾಜೇಗೌಡ
Published on

ಎನ್.ಆರ್.ಪುರ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ಲಾಭದಾಯಿಕ ಸಂಸ್ಥೆಯಾಗಿದೆ ಎಂದು ಇಂಧನ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ೆ.29 ರಂದು ನಿಗಮದ ಬೋರ್ಡ್‌ನ ಸಭೆ ಕರೆಯಲಾಗಿದೆ. ಪ್ರತಿ ವರ್ಷ ನಿಗಮಕ್ಕೆ 90 ಕೋಟಿ ಲಾಭ ಬರುತ್ತಿದೆ. ನಿಗಮದಲ್ಲಿ 700 ರಿಂದ 800 ಕೋಟಿ ರೂ. ಠೇವಣಿ ಇದೆ. ಇದರಲ್ಲಿ 250 ಕೋಟಿ ರೂ. ಸಾಲ ನೀಡಲು ಒಪ್ಪಿಗೆ ನೀಡಲಾಗಿದೆ. ಸರ್ಕಾರಕ್ಕೆ 23 ಕೋಟಿ ರೂ. ಕೂಡಲು ನಿರ್ಧರಿಸಲಾಗಿದೆ ಎಂದರು.
ನವೀಕರಿಸಬಹುದಾದ ಇಂಧನ ನಿಗಮದ ಸಿಆರ್‌ಎಸ್ ಂಡ್‌ನಿಂದ ಕೊಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಟೇಡಿಯಂ ನಿರ್ಮಿಸಲು 1 ಕೋಟಿ ರೂ.ನೀಡಲು ತೀರ್ಮಾನಿಸಲಾಗಿದೆ. ಇಂಧನ ನಿಗಮದಿಂದ ಸೋಲಾರ್‌ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸೋಲಾರ್ ಪಂಪ್‌ಸೆಟ್ ನಿರ್ಮಿಸಿದರೆ ಕೇಂದ್ರ ಸರ್ಕಾರ ಶೇ.20 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.80ರಷ್ಟು ಸಹಾಯ ಧನ ನೀಡಲಿದೆ. ಈ ಬಗ್ಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಪ್ರತಿ ಮನೆ, ಮನೆಗಳಲ್ಲೂ ಸೋಲಾರ್ ದೀಪಕ್ಕೆ ಸಹಾಯ ಧನ ನೀಡಲಾಗುವುದು ಎಂದರು.
ರಾಜ್ಯದ 7 ತಾಲೂಕಿನ ಆಸ್ಪತ್ರೆಗಳನ್ನು 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲಾಗಿದ್ದು ಇದರಲ್ಲಿ ಶೃಂಗೇರಿ ಸರ್ಕಾರಿ ಆಸ್ಪತ್ರೆಯು ಸೇರಿದೆ. ಮಲೆನಾಡಿನಲ್ಲಿ ಆನೆಗಳ ಕಾಟ ಹೆಚ್ಚಾಗಿದ್ದು, ಇವುಗಳ ಹತೋಟಿಗಾಗಿ ರೇಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುವುದು. ಆನೆಗಳನ್ನು ಓಡಿಸಲು ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪದಲ್ಲಿ ಎಲಿಂಟ್ ಟಾಸ್ಕ್ ಪೋರ್ಸ್ ನಿರ್ಮಿಸಲಾಗುವುದು ಎಂದರು.
ಈ ಹಿಂದೆ ಆನೆಗಳನ್ನು ದೇವಸ್ಥಾನದಲ್ಲಿ,ಜಾತ್ರೆಗಳಲ್ಲಿ, ಟಿಂಬರ್ ಎಳೆಯಲು ಬಳಸಲಾಗುತ್ತಿತ್ತು. ಈಗ ಮರಗಳನ್ನು ಎಳೆಯಲು ಕ್ರೇನ್ ಬಳಸಲಾಗುತ್ತಿದೆ. ಆನೆಗಳು ನಾಡಿಗೆ ನುಗ್ಗುತ್ತಿದೆ. ಆನೆಗಳ ಸಂಖ್ಯೆ ಜಾಸ್ತಿಯಾಗಿದೆ. ರೈತರ ಬದುಕು ದುಸ್ತರವಾಗುತ್ತಿದೆ. ಸರ್ಕಾರ, ಅರಣ್ಯ ಇಲಾಖೆ ಗಮನ ಹರಿಸಬೇಕಾಗಿದೆ. ಸದನದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಲಾಗುವುದು. ಕಾಡಿನಲ್ಲಿ ಆನೆಗಳ ಆಹಾರವಾದ ಬಿದಿರು, ಹಲಸು ಮುಂತಾದ ಗಿಡಗಳನ್ನು ಬೆಳೆದರೆ ಆನೆಗಳು ಕಾಡಿನಿಂದ ನಾಡಿಗೆ ಬರುವುದು ಕಡಿಮೆಯಾಗಬಹುದು ಎಂದು ಅಭಿಪ್ರಾಯಪಟ್ಟರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net