ಧರ್ಮದ ಉಳಿವಿಗೆ ಕ್ರಾಂತಿವೀರ ಬ್ರಿಗೇಡ್​

Krantivira Brigade for the survival of religion
ಬಸವನಬಾಗೇವಾಡಿ ಪಟ್ಟಣದ ಗುರುಕೃಪಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಾಣಕ್ಯ ಶಿಶುನಿಕೇತನ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಸಮ್ಮೇಳನದ ಸ್ಥಳ ವೀಕ್ಷಿಸಿದರು. ವಿವಿಧ ಪದಾಧಿಕಾರಿಗಳು ಇದ್ದಾರೆ.
Published on

ಬಸವನಬಾಗೇವಾಡಿ: ರಾಜ್ಯದಲ್ಲೇ ಇತಿಹಾಸ ಸೃಷ್ಟಿಸುವಂತಹ ಐತಿಹಾಸಿಕ ಸಮ್ಮೇಳನವಾಗಿ ಕಾಂತ್ರೀವಿರ ಬ್ರಿಗೇಡ್​ ಹೊರ ಹೊಮ್ಮಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​. ಈಶ್ವರಪ್ಪ ಹೇಳಿದರು.

ಪಟ್ಟಣದ ಗುರುಕೃಪಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಾಣಕ್ಯ ಶಿಶುನಿಕೇತನ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಗುರುವಾರ ಸಮ್ಮೇಳನದ ಸ್ಥಳ ವೀಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಸಮಾನತೆ ಸಾರಿದಂತ ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯಲ್ಲಿ 2025 ೆಬ್ರವರಿ 4 ರಂದು 1008 ನಾಡಿನ ವಿವಿಧ ಮಠಾಧೀಶರು ಹಾಗೂ ಮಹಾತ್ಮರ ಪಾದಪೂಜೆ ಕಾರ್ಯಕ್ರಮ ಹಾಗೂ 1008 ಸುಮಂಗಲೆಯರ ಕುಂಭ ಮೇಳದೊಂದಿಗೆ ನಡೆಯುವ ಸಮ್ಮೇಳನ ಇತಿಹಾಸ ಸಷ್ಟಿಸಲಿದೆ. ಈ ಸಮ್ಮೇಳನ ಯಾವುದೇ ಪ, ಜಾತಿ ಧರ್ಮಕ್ಕೆ ಸೀಮಿತವಾಗಿರುವುದಿಲ್ಲ.

ದುಳಿದ ವರ್ಗದ ಜನರ ಮತ್ತು ಹಿಂದುತ್ವದ ಉಳಿವಿಗಾಗಿ ನಿರಂತರವಾಗಿ ಹೋರಾಟ ಮಾಡಲು ಕ್ರಾಂತಿವೀರ ಬ್ರಿಗೇಡ್​ ಮುಂಚೂಣಿಯಲ್ಲಿರುತ್ತದೆ ಎಂದರು.

ಕ್ರಾಂತಿವೀರ ಬ್ರಿಗೇಡ್​ ಅಧ್ಯ, ಮಕಾನಾಪುರದ ಸೋಮೇಶ್ವರ ಶ್ರೀಗಳು ಮಾತನಾಡಿ, ನಾಡಿನ ಹಲವಾರು ಮಠಾಧೀಶರು ಸೇರಿಕೊಂಡು ಕ್ರಾಂತಿವೀರ ಬ್ರಿಗೇಡ್​ ಎಂಬ ಸಂಸ್ಥೆ ಸ್ಥಾಪಿಸಲಾಗಿದ್ದು, ಈ ಬ್ರಿಗೇಡ್​ನಲ್ಲಿ ಎಲ್ಲ ಸಮಾಜದ ಮಠಾಧೀಶರು ಇದ್ದಾರೆ. ಈ ಸಂಸ್ಥೆ ದೇಶದ ಧರ್ಮ ರಣೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

ಕವಲಗುಡ್ಡ, ಮಾಧುಲಿಂಗ ಮಾಹಾರಾಜರು, ಬಿಳಿಯಾನಿ ಸಿದ್ದಸ್ವಾಮಿ ಜೋಕಾನಟ್ಟಿ, ಅಮರಗುಂಡ ಮಹಾರಾಜರು ಮುಮ್ಮೆಟ್ಟಗುಡ್ಡ, ಚಿನ್ಮಯಾನಂದ ಮಹಾರಾಜರು ಜಗದೀಶಾನಂದ ಲೋಕಾಪುರ, ವಶಿಷ್ಟಸ್ವಾಮಿ ಆಲಮಟ್ಟಿ ,ಅಲ್ಲಮಪ್ರಭು ತೇರದಾಳ, ಬಸವರಾಜ ಬಾಳಿಕಾಯಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net