ಮುಂಬೈನಿಂದ ಕೆ.ಆರ್.ಪೇಟೆಗೆ ಬಂದ 354 ಜನ

13krp-01
Published on

ಕೆ.ಆರ್.ಪೇಟೆ: ಮುಂಬೈನಿಂದ ಕೆ.ಆರ್.ಪೇಟೆಗೆ ನಾಲ್ಕು ದಿನದಿಂದ 354 ಜನರು ಬಂದಿದ್ದು, ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಿ ನಿಗಾ ವಹಿಸಲಾಗಿದೆ.

ಏ.10 ರಿಂದ ಮುಂಬೈನಿಂದ ಕೆ.ಆರ್.ಪೇಟೆಗೆ ಬರಲು ಅನುಮತಿ ನೀಡಲಾಗಿದೆ. ಬಂದವರನ್ನು, ಮಾರ್ಗೊನಹಳ್ಳಿ ಮೂರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಪಟ್ಟಣದ ಅಲ್ಪಸಂಖ್ಯಾತರ ವಸತಿ ಶಾಲೆ, ಗವಿಮಠ ವಸತಿ ಶಾಲೆ, ಸಂತೇಬಾಚಹಳ್ಳಿಯ ಎರಡು ಹಾಸ್ಟೆಲ್‌ಗಳಲ್ಲಿ ನಿಗದಿ ಪಡಿಸಿರುವ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಕೆಲವರು ಖಾಸಗಿ ಲಾಡ್ಜ್‌ಗೆ ಹಣ ಕೊಟ್ಟು ಕ್ವಾರಂಟೈನ್ ಆಗಿದ್ದಾರೆ.

ಎಲ್ಲರ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪಡೆದು ಪರೀಕ್ಷೆಗೆ ಕಳಿಸಿದ್ದಾರೆ. ಈಗಾಗಲೇ 65 ಜನರ ಫಲಿತಾಂಶ ನೆಗೆಟಿವ್ ಬಂದಿದ್ದು, 14 ದಿನದವರೆಗೂ ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು.

ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಟಲು ದ್ರವ ತೆಗೆಯುತ್ತಿರುವ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್ ಅವರಿಂದ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net