

ಬೆಂಗಳೂರು: ಕರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಭಾನುವಾರ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ವಿವಿಧ ಹುದ್ದೆಗಳ ನೇಮಕಾತಿಗಳಿಗೆ ಪರೀಕ್ಷಾ ದಿನಾಂಕಗಳನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ) ಮರು ನಿಗದಿ ಮಾಡಿದೆ.
ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಮೂಹ ‘ಎ’ ವೃಂದ ಸಹಾಯಕ ನಿಯಂತ್ರಕರು, ಅರಣ್ಯ, ಪರಸರ ಮತ್ತು ಜೀವಶಾಸ್ತ್ರ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳು ಪರೀಕ್ಷಾ ದಿನಾಂಕವನ್ನು ಮರು ನಿಗದಿಪಡಿಸಿ ಅದೇಶಿಸಿದೆ.
ಅರಣ್ಯ ಇಲಾಖೆಯಲ್ಲಿನ ಗ್ರೂಪ್ ‘ಎ’ ವೃಂದ್ದ 24 ಸಹಾಯಕ ಅರಣ್ಯ ಸರಂರಕ್ಷಣಾಧಿಕಾರಿಗಳ ಹುದ್ದೆಗಳ ಭರ್ತಿಗೆ ಜುಲೈ 7, ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕ ನೇಮಕ ಪರೀಕ್ಷೆಯನ್ನು ಆಗಸ್ಟ್ 17, ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 24ರಂದು ನಡೆಸುವುದಾಗಿ ಕೆಪಿಎಸ್ಸಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ http://www.kpsc.kar.nic.in/ ನೋಡಬಹುದಾಗಿದೆ.