

ಮಡಿಕೇರಿ
ಸರ್ಕಾರದ ಮಹತ್ವಾಕಾಂಕ್ಷಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಪಟ್ಟಿಗೆ ಕೊಡಗಿನಲ್ಲಿ ಮತ್ತೆ 5 ಶಾಲೆಗಳು ಸೇರ್ಪಡೆ ಆಗುತ್ತಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಬಲಪಡಿಸುವಿಕೆ ಭಾಗವಾಗಿ ಆರಂಭಿಸಲಾದ ಕೆಪಿಎಸ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ಕೊಡುವುದರಿಂದ ಅರ್ಧದಲ್ಲೇ ಶಾಲೆ ಬಿಡುವವರ ಸಂಖ್ಯೆಯೂ ಗಣನೀಯವಾಗಿ ಇಳಿದಿದೆ. ಹಾಗಾಗಿ ಸರ್ಕಾರದ ಈ ನಿರ್ಧಾರ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.
ಅಸ್ತಿತ್ವದಲ್ಲಿರುವ ಸರ್ಕಾರಿ ಶಾಲೆಗಳನ್ನು ಸಂಯೋಜಿಸಿ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಶೈಕ್ಷಣಿಕ ಸಂಸ್ಥೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಎಂದು ಕರೆಯಲಾಗುತ್ತದೆ. ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಮತ್ತು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಕರ್ನಾಟಕ ಸರ್ಕಾರ 2018-19ರ ಸಾಲಿನಲ್ಲಿ ಕೆಪಿಎಸ್‌ಗಳನ್ನು ಆರಂಭಿಸಿತು. ಈ ಶಾಲೆಗಳು ಗುಣಮಟ್ಟದ ಸಾರ್ವಜನಿಕ ಶಿಕ್ಷಣಕ್ಕಾಗಿ ಒಂದು ಅಭೂತಪೂರ್ವ ಬದಲಾವಣೆಯ ಚೌಕಟ್ಟನ್ನು ಒದಗಿಸುತ್ತದೆ ಎನ್ನುವುದು ಸರ್ಕಾರದ ನಂಬಿಕೆ.
ಪ್ರಸ್ತುತ ಒಟ್ಟು ದಾಖಲಾತಿ ಅನುಪಾತ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 98.65, ಹಿರಿಯ ಪ್ರಾಥಮಿಕ ವಿಭಾಗ ಶೇ. 99.79 ಹಾಗೂ ಪ್ರೌಢಶಾಲೆಗೆ ಸಂಬAಧಿಸಿದAತೆ ಶೇ.96.08 ಇರುತ್ತದೆ. ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ದರ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 2.50, ಹಿರಿಯ ಪ್ರಾಥಮಿಕ ವಿಭಾಗ ಶೇ.2.91 ಹಾಗೂ ಪ್ರೌಢಶಾಲೆಗೆ ಸಂಬAಧಿಸಿದAತೆ ಶೇ.22.88 ಇರುತ್ತದೆ. ಪ್ರಾಥಮಿಕ ಹಂತದಿAದ ಪ್ರೌಢಶಾಲಾ ಹಂತಕ್ಕೆ ಮುಂದುವರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆ ಆಗುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆ.
ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ದರ ಕಡಿಮೆ ಮಾಡಲು ಒಂದೇ ಆವರಣದಲ್ಲಿ ಪ್ರಾಥಮಿಕ ತರಗತಿಗಳಿಂದ ಪದವಿಪೂರ್ವ ತರಗತಿಗಳವರೆಗೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸುವುದು ಸೂಕ್ತ ಪರಿಹಾರ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಹಾಗಾಗಿಯೇ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಆರಂಭಿಸುವ ನಿರ್ಧಾರ ಸರ್ಕಾರ ತೆಗೆದುಕೊಂಡಿತು.
2021ರಲ್ಲಿ ಕೆಪಿಎಸ್‌ಗಳಿಗೆ ಸರಾಸರಿ ದಾಖಲಾತಿ ಸುಮಾರು 785 ವಿದ್ಯಾರ್ಥಿಗಳಾಗಿದ್ದು, 2025-26ರಲ್ಲಿ ಇದು ಸುಮಾರು 819 ವಿದ್ಯಾರ್ಥಿಗಳಿಗೆ ಏರಿಕೆಯಾಗಿದೆ. ಕೆಪಿಎಸ್‌ಗಳಲ್ಲಿ 10ನೇ ತರಗತಿಯ ಪರೀಕ್ಷಾ ಫಲಿತಾಂಶ ಶೇ.79.97ರಷ್ಟ್ತಿದೆ. ಈ ಶಾಲೆಗಳಿಗೆ ಸಮುದಾಯದ ಬೆಂಬಲ, ಮೂಲಸೌಕರ್ಯ ಬಲವರ್ಧನೆ ಹಾಗೂ ಬೇಡಿಕೆಗನುಗುಣವಾದ ಪ್ರೋತ್ಸಾಹದ ಅಗತ್ಯತೆ ಬಗ್ಗೆಯೂ ಸರ್ಕಾರ ಗಮನ ಹರಿಸುತ್ತಿದೆ. 2018 ಮತ್ತು 2024ರ ನಡುವೆ ರಾಜ್ಯದಲ್ಲಿ ಸ್ಥಾಪನೆಯಾದ 308 ಕೆಪಿಎಸ್‌ಗಳಲ್ಲಿ 2.8 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 2025-26ರಲ್ಲಿ ದಾಖಲಾತಿ ಚೇತರಿಕೆ ಮತ್ತಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಈ ಶಾಲೆಗಳು ಕಲಿಕೆಯ ಗುಣಮಟ್ಟ ಉತ್ತಮಪಡಿಸಲು ಉತ್ತೇಜಿಸುವುದು ಮಾತ್ರವಲ್ಲದೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪಿಯುಸಿ ಹಂತಗಳಲ್ಲಿ ದಾಖಲಾತಿ ಸಂದರ್ಭ ಶಾಲೆ ಬಿಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. 2018-19ರಲ್ಲಿ ರಾಜ್ಯದಲ್ಲಿ 176 ಶಾಲೆಗಳೊಂದಿಗೆ ಆರಂಭವಾದ ಕೆಪಿಎಸ್‌ಗಳ ಸಂಖ್ಯೆ ಪ್ರಸ್ತುತ 309 ಶಾಲೆಗಳಾಗಿದ್ದವು. ಮತ್ತೆ ರಾಜ್ಯಾದ್ಯಂತ 500 ಶಾಲೆಗಳ ಆರಂಭದ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಆಗಿದ್ದ ಹಿನ್ನೆಲೆಯಲ್ಲಿ 2025-26 ಮತ್ತು 2026-27ನೇ ಸಾಲಿನಿಂದಲೇ ಹೊಸ ಶಾಲೆಗಳನ್ನು ಆರಂಭಿಸುವAತೆ ಈ ತಿಂಗಳ 15ರಂದು ಸರ್ಕಾರ ಆದೇಶ ಮಾಡಿದೆ. ಕೊಡಗಿನಲ್ಲೂ 5 ನೂತನ ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭವಾಗಲಿವೆ.
ಈ ಶಾಲೆಗಳಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದ್ದು, ಗುಣಮಟ್ಟದ ಮೂಲಸೌಕರ್ಯ, ತಂತ್ರಜ್ಞಾನ-ಆಧಾರಿತ ಕಲಿಕೆ, ಮತ್ತು ಉತ್ಕೃಷ್ಟತೆಯ ಕೇಂದ್ರಗಳಾಗಿ ರೂಪಿಸುವ ಉದ್ದೇಶದೊಂದಿಗೆ ಕಾರ್ಯಾಚರಿಸಲಾಗುತ್ತಿದೆ. ಪೂರ್ವ-ಪ್ರಾಥಮಿಕದಿಂದ ಪಿಯುಸಿ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಸುಧಾರಿತ ಗುಣಮಟ್ಟದ ಶಿಕ್ಷಣ ನೀಡುವು ಕೆಪಿಎಸ್‌ಗಳ ಪ್ರಮುಖ ಗುರಿಯಾಗಿದೆ. ಆಧುನಿಕ ಕಲಿಕಾ ವಾತಾವರಣವನ್ನು ಒದಗಿಸಲು ಉತ್ತಮ ಪ್ರಯೋಗಾಲಯಗಳು, ಗ್ರಂಥಾಲಯ ಹಾಗೂ ಇತರ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ.
ಸಮಗ್ರ ಶಿಕ್ಷಣವನ್ನು ಉತ್ತೇಜಿಸಲು ವಿದ್ಯಾರ್ಥಿ-ಕೇಂದ್ರಿತ ಮತ್ತು ಸಮುದಾಯ-ಆಧಾರಿತ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ತರಬೇತಿ ಪಡೆದ ಶಿಕ್ಷಕರಿಂದ ಸಕ್ರಿಯ ಬೋಧನಾ ವಿಧಾನಗಳನ್ನು ಅನುಸರಿಸಲು ಮತ್ತು ತಂತ್ರಜ್ಞಾನವನ್ನು ಬಳಸಲು ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ.
ಕಲಿಕಾ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಲು ವಿಶ್ವಾಸಾರ್ಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವುದು ಮತ್ತು ದಾಖಲಾತಿಯನ್ನು ಹೆಚ್ಚಿಸುವ ಗುರಿಯೂ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆಯ ಹಿಂದಿದೆ.
ರಾಜ್ಯ ಸರ್ಕಾರದ ಅನುದಾನ ಮತ್ತು ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಾಲ ಯೋಜನೆಯಡಿ ಈ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ.
ಏಷಿಯನ್ ಡೆವೆಲಪ್‌ಮೆಂಟ್ ಬ್ಯಾಂಕ್ ಸಾಲ ಯೋಜನೆಯಡಿ ಪ್ರತಿ ಶಾಲೆಗೆ ಅವಶ್ಯವಿರುವ ಮೂಲ ಸೌಕರ್ಯಕ್ಕಾಗಿ 2 ರಿಂದ 4 ಕೋಟಿ ರೂ. ತನಕ ಖರ್ಚು ಮಾಡಲಾಗುತ್ತದೆ. ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಏಕರೀತಿಯ ಪಠ್ಯಪುಸ್ತಕ ಆಧರಿತ ದ್ವಿಭಾಷಾ ಮಾಧ್ಯಮದ ಬೋಧನೆ, 6 ರಿಂದ 10ನೇ ತರಗತಿವರೆಗೆ ಮಾಧ್ಯಮವಾರು ಏಕ ರೀತಿಯ ಪಠ್ಯಪುಸ್ತಕ ಆಧರಿತ ತರಗತಿ ಹಾಗೂ ಕ್ರಿಯಾಶೀಲ ಬೋಧನಾ ಪದ್ಧತಿ ಇಲ್ಲಿದೆ. 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣದ ಪರಿಚಯ, 6ನೇ ತರಗತಿಯಿಂದ ವೃತ್ತಿಪರ ಕೌಶಲ ಆಧರಿತ ಪಠ್ಯಕ್ರಮದ ಪರಿಚಯ, 8ನೇ ತರಗತಿಯಿಂದ ಮಂಡಳಿ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಂಥ ಶಿಕ್ಷಣ ವ್ಯವಸ್ಥೆ ಕೆಪಿಎಸ್‌ನಲ್ಲಿ ಇರುತ್ತದೆ.
ಕೊಡಗಿನಲ್ಲಿ ಆರಂಭವಾಗುತ್ತಿರುವ ಕೆಪಿಎಸ್‌ಗಳು
ಸೋಮವಾರಪೇಟೆ ತಾಲೂಕು:
ಸರ್ಕಾರಿ ಪಿಯು ಕಾಲೇಜು ಪ್ರೌಢಶಾಲಾ ವಿಭಾಗ, ಕುಶಾಲನಗರ
ಸರ್ಕಾರಿ ಪಿಯು ಕಾಲೇಜು, ಶಿರಂಗಾಲ
ಸರ್ಕಾರಿ ಪಿಯು ಕಾಲೇಜು, ಕೂಡಿಗೆ
ವಿರಾಜಪೇಟೆ ತಾಲೂಕು:
ಜಿ.ಎಂ.ಪಿ. ಶಾಲೆ, ಗೋಣಿಕೊಪ್ಪಲು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಟ್ಟ
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಕುಶಾಲನಗರ, ಕೂಡಿಗೆ ಹಾಗೂ ಶಿರಂಗಾಲ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೋಣಿಕೊಪ್ಪಲು ಮತ್ತು ಕುಟ್ಟ ಶಾಲೆಗಳು... ಹೀಗೆ ಕೊಡಗಿನ ಒಟ್ಟು 5 ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಾಗಿ ಉನ್ನತೀಕರಣಗೊಂಡಿವೆ. ಈ ಬಗ್ಗೆ ಸರ್ಕಾರದ ಆದೇಶ ಹೊರಬಿದ್ದಿದೆ. ಮುಂದಿನ ಸಾಲಿನಿಂದಲೇ ಇಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯಾರಂಭ ಮಾಡಲಿವೆ. ಈ ಭಾಗದ ಶೈಕಣಿಕ ಪ್ರಗತಿ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಇದರಿಂದ ಹೆಚ್ಚಿನ ಪ್ರಯೋಜನ ಆಗಲಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಕೊಡಗಿನಲ್ಲಿ ಈಗಾಗಲೇ ಪೊನ್ನಂಪೇಟೆ, ನಾಪೋಕ್ಲು ಹಾಗೂ ನೆಲ್ಯಹುದಿಕೇರಿಯಲ್ಲಿ ಒಟ್ಟು 3 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಿವೆ. ಇದೀಗ ಮತ್ತೆ 5 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳು ಮಂಜೂರಾಗಿದೆ. ಈ ಸಂಬAಧ ಸರ್ಕಾರದಿಂದ ಆದೇಶ ಬಂದಿದೆ. ಇಲ್ಲಿ ಈ ಡಿಸೆಂಬರ್‌ನಿAದಲೇ ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಿದ್ದಾರೆ. ಇದಕ್ಕೆ ಸಂಬAಧಿಸಿದAತೆ ಪೂರಕ ನಿರ್ದೇಶನಗಳು ಬಂದ ಕೂಡಲೇ ಅಗ್ಯತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಆಯಾಯ ವ್ಯಾಪ್ತಿಯ ಬಿಇಒಗಳಿಗೆ ಸೂಚಿಸಲಾಗುವುದು.
ಬಸವರಾಜು, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ