

ಮಂಗಳೂರು : ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಪ್ರದೇಶದ ಕೆಡಿಎಜಿಬಿ (ಕುಡಾಳ್ ದೇಶ್ಕರ್ ಆದ್ಯ ಗೌಡ್ ಬ್ರಾಹ್ಮಣ) ಸಂಘದ ವತಿಯಿಂದ ನ.24ರಿಂದ 26ರವರೆಗೆ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ
ಬಿಸಿನೆಸ್ ಕಾನ್‌ಕ್ಲೇವ್ ಮತ್ತು 8ನೇ ಕೆಪಿಎಲ್ ಕ್ರೀಡಾ ಮಹೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ 3ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದು ಕೆಪಿಎಲ್ ಮಹಾ ಸಂಚಾಲಕ ಮಹೇಶ್ ಠಾಕೂರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.25ರಂದು ಮಹಾರಾಷ್ಟ್ರದ ಕೈಗಾರಿಕಾ ಸಚಿವ ಉದಯ್ ಸಾಮಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ , ಮಂಜುನಾಥ ಭಂಡಾರಿ , ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮಾಜಿ ಆಟಗಾರ್ತಿ ಸುಲಕ್ಷಣಾ ನಾಯಕ್ ಮುಖ್ಯ
ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೆಪಿಎಲ್ ಕ್ರೀಡಾಕೂಟದಲ್ಲಿ ಕ್ರಿಕೆಟ್, ಥ್ರೋಬಾಲ್, ಕೇರಂ, ಟೇಬಲ್ ಟೆನಿಸ್ ಮತ್ತು ಚೆಸ್ ಪಂದ್ಯಾಟ ನಡೆಯಲಿದೆ. 32 ಪುರುಷ ಕ್ರಿಕೆಟ್ ತಂಡಗಳು, 12 ಮಹಿಳಾ ಕ್ರಿಕೆಟ್ ತಂಡಗಳು, 220 ಚೆಸ್ ಆಟಗಾರರು, 120 ಕೇರಂ ಆಟಗಾರರು, 50 ಟೇಬಲ್ ಟೆನಿಸ್ ಆಟಗಾರರು ಮತ್ತು 10 ಥ್ರೋಬಾಲ್ ತಂಡಗಳು ಪಾಲ್ಗೊಳ್ಳಲಿವೆ. ಕಲೆ ಮತ್ತು ರಂಗೋಲಿ ಸ್ಪರ್ಧೆ ನಡೆಸಲಾಗುವುದು .ಚಿತ್ರಕಲೆ, ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದೆ. ಪ್ರತೀದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಯುನೈಟ್ ಎಂಪವರ್ ಮತ್ತು ಇನ್‌ಸ್ಪೈರ್ ವಿಷಯದ ಬಗ್ಗೆ ನ.25ರಂದು ಬೆಳಗ್ಗೆ 10 ರಿಂದ ಸಾಯಂಕಾಲ 5 ರವರೆಗೆ ಬಿಸಿನೆಸ್ ಕಾನ್‌ಕ್ಲೇವ್ ನಡೆಯಲಿದೆ. ವಿವಿಧ ವಲಯಗಳ ಉದ್ಯಮಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಕೆಪಿಎಲ್ ಅಧ್ಯಕ್ಷ ಸಂಜೀವ ನಾಯ್ಕ ಕಲ್ಲೇಗ, ಕಾರ್ಯದರ್ಶಿ ಶಿವಾನಂದ ಪ್ರಭು, ಕ್ರೀಡಾ ಸಂಚಾಲಕ ಮನೀಶ್ ದಾಭೋಲ್ಕರ್,
ಗೌಡ ಬ್ರಾಹ್ಮಣ ಸಭಾ ಗಿರ್‌ಗಾಂವ್ ಸಂಘದ ಅಧ್ಯಕ್ಷ ಜಗದೀಶ ವಾಳವಲ್ಕರ್, ರಮೇಶ್ ನಾಯಕ್ , ಮೋಹನದಾಸ್ ಪಾಟೀಲ್, ಶಿವಾನಂದ ಪ್ರಭು, ಸಂಜಯ ಪ್ರಭು, ಅಕ್ಷತಾ ನಾಯಕ್ , ಪ್ರವೀಣ್ ದರ್ಬೆ, ಸತೀಶ್ ಪಾಟೀಲ್ ಉಪಸ್ಥಿತರಿದ್ದರು.