

ಕೊಪ್ಪಳ: ಹಾಸನದ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಮಹಿಳೆಯರ ಮಾನ ಹಾನಿ ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆದಿದ್ದು, ರಾಜ್ಯದ ಮರ್ಯಾದೆ ಹರಾಜಾಗಿದೆ ಎಂದು ಕೆಪಿಸಿಸಿ ಮಹಿಳಾ ಟಕ ಅಧ್ಯೆ ಡಾ.ಪುಷ್ಪ ಅಮರನಾಥ ಟೀಕಿಸಿದರು.
ನಗರದ ಜಿಲ್ಲಾ ಕಾಂಗ್ರಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಪೆನ್ ಡೆವ್ ಪಕ್ರಣದಲ್ಲಿ ಇಷ್ಟೆಲ್ಲ ಬೆಳವಣಿಗೆ ನಡೆದರೂ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯುತ್ತಿಲ್ಲ. ಆತನ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿಲ್ಲ. ಯಾವುದೋ ದೇಶದ ಯುದ್ಧ ನಿಲ್ಲಿಸುವ ಅವರು ಈಗ ಯಾಕೆ ಸುಮ್ಮನಿದ್ದಾರೆ. ಈ ಮೂಲಕ ಅತ್ಯಾಚಾರಿಗಳಿಗೆ ದೇಶದಲ್ಲಿ ಗೌರವವಿದೆ. ಮಾನವಂತರಿಗಲ್ಲ ಎಂಬ ಸಂದೇಶ ನೀಡುತ್ತಿದ್ದಾರೆ. ಇದು ಒಂದೇ ಪ್ರಕರಣವಲ್ಲ. ಮಣಿಪುರ ಸೇರಿ ಅನೇಕ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಅವರು ತುಟಿ ಬಿಚ್ಚಿಲ್ಲ. ಚುನಾವಣಾ ಆಯೋಗ ಪ್ರಕರಣ ಗಂಭೀರವಾಗಿ ಪರಿಗಣಿಸಲಿ. ಪ್ರಜ್ವಲ್ ಸ್ಪರ್ಧೆ ಅನೂರ್ಜಿತಗೊಳಿಸಲಿ ಎಂದು ಆಗ್ರಹಿಸಿದರು.
ದೇಶದಲ್ಲಿ ಬೆಲೆ ಏರಿಕೆ ಬೆಂಬಿಡದೆ ಕಾಡುತ್ತಿದೆ. ಮೋದಿ ನೀಡಿದ ಒಂದೂ ಭರವಸೆ ಈಡೇರಿಸಿಲ್ಲ. ನಮ್ಮ ಗ್ಯಾರಂಟಿಯನ್ನು ಟೀಕಿಸಿದರು. ನಾವು ಯಶಸ್ವಿಯಾಗಿ ಜಾರಿ ಮಾಡಿದ ಮೇಲೆ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ನಾವು ಸಹಿ ಮಾಡಿ ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಬಿಜೆಪಿ ಪ್ರಣಾಳಿಕೆಯಲ್ಲಿ ಮೋದಿ ಅವರ ಸಹಿ ಇದೆಯಾ ? ಅದು ನಿಜಾನಾ, ಹೇಗೆ ನಂಬಬೇಕು. ಎಲ್ಲ ಸುಳ್ಳು ಭರವಸೆ. ದೇಶದಲ್ಲಿ ಬಿಜಿಪಿ ಹಠಾವೊ ದೇಶ ಬಚಾವೋ ಅಭಿಯಾನ ಆರಂಭವಾಗುತ್ತಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದ ಇವರ ಆಡಳಿತ ಯಾಕೆ ಬೇಕು ಎಂದು ಪ್ರಶ್ನಿಸಿದರು.
ನೇಹಾ ಕುಟುಂಬಕ್ಕೆ ನ್ಯಾಯ ಸಿಗದಿದ್ದರೆ ನಾನು ಧರಣಿ ಕೂಡುವೆ. ಹಾಸನ ಮಹಿಳೆಯರ ಪ್ರಕರಣದಲ್ಲಿ ಮೇ 7 ರೊಳಗೆ ಪ್ರಜ್ವಲ್ ಬಂಧವಾಗದಿದ್ದರೆ ಬಿಜೆಪಿಯವರು ಹೋರಾಟ ಮಾಡುತ್ತಾರಾ ? ಮಂದಿರ, ಮಸೀದಿ, ಮಾಂಗಲ್ಯ ವಿಷಯ ಮುಂದಿಟ್ಟು ಮತ ಕೇಳುವುದು ಬಿಜೆಪಿ ಬಿಡಲಿ. ಡಾ.ಪುಷ್ಪ ಅಮರನಾಥ
ಡಾ.ಪುಷ್ಪ ಅಮರನಾಥ