

ಮಂಡ್ಯ: ಕಂದಾಯ ಸೇವೆಗಳಲ್ಲಿ ಸುಧಾರಣೆ ತರಲು ರಾಜ್ಯಸರ್ಕಾರ ಭೂ ಗ್ಯಾರೆಂಟಿಯನ್ನು ಪರಿಚಯಿಸಲಾಗುತ್ತಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಕಶ್ಯಪ್ ತಿಳಿಸಿದರು.
ಯೋಜನೆಗೆ ಸಂಬಂದಿಸಿದಂತೆ ಭೂ ಸಮಸ್ಯೆಗಳ ಸಂಬಂಧಿಸಿದಂತೆ ರೈತರು ಇನ್ನು ಕಂದಾಯ ಇಲಾಖೆಗೆ ಅಲೆಯುವ ಅಗತ್ಯ ಇರುವುದಿಲ್ಲ. ಮನೆಯಲ್ಲೇ ಕುಳಿತು ಅಥವಾ ಕೈಬೆರಳಂಚಿನಲ್ಲಿ ಭೂ ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆ ಜಾರಿ ಮಾಡಿದೆ. ಇದಕ್ಕಾಗಿ 52 ಸಾವಿರ ಕೋಟಿ ರೂಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ. ಇದೀಗ ಭೂ ಗ್ಯಾರೆಂಟಿ ಮೂಲಕ ಬೆಳೆ ನಷ್ಟ, ಪೂಡಿ ಮುಕ್ತ ಗ್ರಾಮ, ಸಾರ್ವಜನಿಕ ಆಸ್ತಿ ಸಂರಕ್ಷಣೆ, ತ್ವರಿತ ಮತ್ತು ಪಾರದರ್ಶಕ ಭೂ ನ್ಯಾಯ ಸೇರಿದಂತೆ ಹತ್ತು ಹಲವು ಕಂದಾಯ ಸಂಬಂಧಿತ ಸೇವೆಗಳನ್ನು ಸರಳೀಕರಣ ಮಾಡಿದೆ. ಬೆಂಗಳೂರಿನ ಅಭಿವೃದ್ಧಿಗೆ ಬ್ರ್ಯಾಂಡ್ ಬೆಂಗಳೂರು ಯೋಜನೆ, ಸಣ್ಣ ನೀರಾವತಿಯಿಂದ ಟ್ರೀಟೆಡ್ ವಾಟರ್ ಮೂಲಕ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರೊದಗಿಸಲಾಗುವುದು. ಕೆ.ಆರ್.ಪೇಟೆ, ನಾಗಮಂಗಲ ತಾಲೂಕಿನ 88 ಕೆರೆ ತುಂಬಿಸಲು ಯೋಜನೆ, ರಾಜ್ಯಾದ್ಯಂತ 66 ಮುರಾರ್ಜಿ ದೇಸಾಯಿ ಶಾಲೆ ತೆರೆಯಲು ಯೋಜನೆ, ಇನ್ವೆಸ್ಟ್ ಕರ್ನಾಟಕ ಮೂಲಕ 6,57,600 ಕೋಟಿ ರೂ ಬಂಡವಾಳ ಆಕರ್ಷಿಸಿದ್ದು, ವಿದೇಶಿ ರಾಷ್ಟ್ರಗಳ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಷ್ಟ್ರದಲ್ಲಿಯೇ ಮೂರನೇ ಸ್ಥಾನ ಅಲಂಕರಿಸಿದೆ ಎಂದು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ವಕ್ತಾರ ಸಿ.ಎಂ.ದ್ಯಾವಪ್ಪ, ಮಂಜುನಾಥ್, ಪ್ರದೀಪ್ ಇದ್ದರು.