ದೇಶದ ಪರಂಪರೆ ಕಾಪಾಡುವಲ್ಲಿ ಯುವಕರ ಪಾತ್ರ ಮಹತ್ವದ್ದು

JLR ph 3 Oct 26 Valmiki Jayanthi
Published on

ಜಗಳೂರು: ಮಹರ್ಷಿ ವಾಲ್ಮೀಕಿಯವರ ಚಿಂತನೆ, ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಅರ್ಥಪೂರ್ಣವಾಗಲಿದೆ ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್ ಹೇಳಿದರು.

ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಭಾನುವಾರ ಹಾಲಸ್ವಾಮಿ ಸೇವಾ ಸಮಿತಿ, ಉತ್ಸಾಹಿ ಯುವಕ ಸಂಘ ಹಾಗೂ ನಾಯಕ ಸಮುದಾಯದಿಂದ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ರಾಜವೀರ ಮದಕರಿ ನಾಯಕ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ದೇಶದ ಪರಂಪರೆ ಕಾಪಾಡುವುದರಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ. ವ್ಯಕ್ತಿಯ ನಡತೆ ಮತ್ತು ಅವನ ಜೀವನ ನಡೆಸಲು ವಾಲ್ಮೀಕಿ ಚಿಂತನೆಗಳು ಮಾರ್ಗದರ್ಶನ ನೀಡಲಿವೆ. ಆಧುನಿಕ ದಿನಗಳಲ್ಲಿ ಜಯಂತಿಗಳು ವರ್ತಮಾನಗಳ ಬಗ್ಗೆ ತಿಳಿಸುತ್ತದೆ ಎಂದರು.

ಅಪ್ರತಿಮ ಪರಾಕ್ರಮ, ನಿರ್ಭೀತ ನಡೆ ಹಾಗೂ ಜನಪರ ಕಾರ್ಯಗಳಿಂದ ಮದಕರಿ ನಾಯಕರು ಚಿತ್ರದುರ್ಗ ಸಂಸ್ಥಾನದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದರು. ಏಳು ಸುತ್ತಿನ ಕೋಟೆ ಆಳಿದ ಮದಕರಿನಾಯಕ ತಮ್ಮ ಆಡಳಿತಾವಧಿಯಲ್ಲಿ ಸಂಸ್ಥಾನವನ್ನು ಬಲಪಡಿಸಿ ಜನಪರ ಯೋಜನೆಗಳ ಮೂಲಕ ನಾಡನ್ನು ಸುಭಿಕ್ಷೆಯಿಂದ ಮುನ್ನಡೆಸಿದ್ದರು ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಹಾಗೂ ಮದಕರಿ ನಾಯಕ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು, ಉರುಮೆ, ಡ್ರಮ್ ಸೆಟ್ ಸೇರಿ ವಿವಿಧ ಕಲಾ ತಂಡಗಳ ಭವ್ಯ ಮೆರವಣಿಗೆ ಸಾಗಿತು.

ಈ ಸಂದರ್ಭದಲ್ಲಿ ಮುಖಂಡರಾದ ಕೆಚ್ಚೇನಹಳ್ಳಿ ಹರೀಶ್, ನಾಗರಾಜ್, ಮಾರುತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net