ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ವಿಫಲ : ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಟೀಕೆ

14 cnh 1
Published on

ಚಿಕ್ಕನಾಯಕನಹಳ್ಳಿ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ನಿರುದ್ಯೋಗ ಸಮಸ್ಯೆ ಪರಿಹರಿಸುವುದನ್ನು ಬಿಟ್ಟು ಸಂವಿಧಾನ ತಿದ್ದುಪಡಿ ವಾಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿವೆ ಎಂದು ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಶುಕ್ರವಾರ ನಿರುದ್ಯೋಗಿಗಳ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೇವಲ ವಿದ್ಯಾವಂತರಷ್ಟೇ ನಿರುದ್ಯೋಗಿಗಳಲ್ಲ, ರೈತರು, ವ್ಯಾಪಾರಸ್ಥರು ನಿರುದ್ಯೋಗಿಗಳಾಗುತ್ತಿದ್ದು, ದೇಶವು ಆರ್ಥಿಕ ದಿವಾಳಿಯತ್ತಿದೆ. ಇದನ್ನು ಮರೆವಾಚಲು ಕೇಂದ್ರ ಸರ್ಕಾರ ಇಲ್ಲದ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಜನರ ನೆಮ್ಮದಿ ಹಾಳು ವಾಡುತ್ತಿದೆ ಎಂದು ಕಿಡಿಕಾರಿದರು.

ಉದ್ಯೋಗ ಸೃಷ್ಟಿ, ಕಪ್ಪುಹಣ ವಾಪಸ್ ತರುವ ಭರವಸೆಯಿಂದ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಉತ್ತಮ ಆಡಳಿತಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಜನ ನೀರಿಕ್ಷಿಸಿದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಬಲವರ್ಧನೆಗೆ ಗ್ರಾಮಮಟ್ಟದಲ್ಲಿ ಕಾರ್ಯಕರ್ತರನ್ನು ಸಂಟಿಸಲಾಗುತ್ತಿದೆ. ನಿರುದ್ಯೋಗಿಗಳ ರಾಷ್ಟ್ರೀಯ ನೋಂದಣಿ ಅಭಿಯಾನ ಪ್ರಾರಂಭಿಸಿದ್ದು, ನೌಕರಿ ಕಿ ಬಾತ್ ಎಂಬ ವಾಕ್ಯದೊಂದಿಗೆ ಭಾರತೀಯರ ನಿರುದ್ಯೋಗಿ ಯುವಕರ ಧ್ವನಿಯಾಗಲು ಕಾಂಗ್ರೆಸ್ ಮುಂದಾಗಿದೆ ಎಂದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ಮಾತನಾಡಿದರು. ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಕಾಂಗ್ರೆಸ್‌ನ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಮುಖಂಡರಾದ ತೀರ್ಥಪುರ ವಾಸು, ಮಹಲಿಂಗನಾಯಕ, ಪುರಸಭಾ ಸದಸ್ಯೆ ಉವಾಪರಮೇಶ್, ವಕ್ತಾರ ಕೆ.ಜಿ.ಕೃಷ್ಣೇಗೌಡ, ಪ್ರಧಾನಕಾರ್ಯದರ್ಶಿ ಬ್ರಹ್ಮಾನಂದ್, ಮಹಿಳಾ ಘಟಕ ಅಧ್ಯಕ್ಷೆ ಅನಂತಲಕ್ಷ್ಮೀ, ವಕೀಲ ಪರಮೇಶ್ ಇದ್ದರು.

ರೈತರಿಗೆ ಅನ್ಯಾಯ: 2014ರ ಸೆ.24ರಂದು ಜಿಲ್ಲೆಯ ವಸಂತನರಸಾಪುರದಲ್ಲಿ 114 ಎಕರೆ ಪ್ರದೇಶದಲ್ಲಿ ಪ್ಪುಡ್‌ಪಾರ್ಕ್ ಪ್ರಾರಂಭಿಸಿದರು. ಅದೇ ರೀತಿ 2016ರ ಜ.3ರಂದು ಗುಬ್ಬಿ ತಾಲೂಕಿನಲ್ಲಿ ಎಚ್‌ಎಎಲ್ ಟಕ ಸ್ಥಾಪಿಸಲಾಯಿತು. ಭೂಮಿ ನೀಡಿದ ರೈತರಿಗೆ ಈವರೆಗೆ ಸರಿಯಾಗಿ ಪರಿಹಾರ ನೀಡದೇ ಅದು ಬಗರ್‌ಹುಕುಂ ಜಾಗ ಎಂದು ಹೇಳುವ ಜಿಲ್ಲಾಧಿಕಾರಿ ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಮುರಳೀಧರ ಹಾಲಪ್ಪ ಬೇಸರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net