

ಚಳ್ಳಕೆರೆ: ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮಾದಿಗ ಸಮುದಾಯದವರು ಅಥವಾ ಸ್ಥಳೀಯರಿಗೆ ಟಿಕೆಟ್ ನೀಡಲು ನಿರ್ಧರಿಸಿದರೇ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ದೊರೆಯಲಿದೆ ಎಂದು ಕೆಪಿಸಿಸಿ ಕರಕುಶಲ ವಿಭಾಗದ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾದಿಗ ಯುವಸೇನೆ, ಜಿಲ್ಲಾ ಮಾದಿಗ ದಂಡೋರಾ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಸಕರು ಮತ್ತು ಸಚಿವರ ಅಭಿನಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಲಿತ ಸಮುದಾಯ ರಾಜಕೀಯವಾಗಿ ಬಲವರ್ಧನೆ ಆಗಬೇಕಿದ್ದು, ಇದಕ್ಕೆ ವೇದಿಕೆ ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಮೀಸಲು ಕ್ಷೇತ್ರದಲ್ಲಿ 4 ಲಕ್ಷಕ್ಕೂ ಅಧಿಕ ಜನರು ಮಾದಿಗ ಸಮುದಾಯದವರಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಗೆ ಅವಕಾಶ ನೀಡಬೇಕಿದೆ.
ಈಗಾಗಲೇ ಪರಾಜಿತ ಅಭ್ಯರ್ಥಿ ಡಾ.ಬಿ.ತಿಪ್ಪೇಸ್ವಾಮಿ, 15 ವರ್ಷಗಳಿಂದ ಪಕ್ಷದ ಸಿದ್ದಾಂತ ಮತ್ತು ಕಾರ್ಯಕರ್ತರ ಸಂಘಟಿತ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಜೆ. ವೆಂಕಟೇಶ್ ಮಾತನಾಡಿ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಗೆ ರಾಜಕೀಯ ಸ್ಥಾನಮಾನ ಸಿಗಬೇಕು.
ಲೋಕಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಬೇರೆ ಜಿಲ್ಲೆಗಳ ಅಭ್ಯರ್ಥಿಗಳ ಭಾಗವಹಿಸುವಿಕೆಯಿಂದ ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯರ ಅಸ್ತಿತ್ವ ಉಳಿಯುತ್ತಿಲ್ಲ ಎಂದರು.
ತಾಪಂ ಮಾಜಿ ಸದಸ್ಯ ಟಿ. ಗಿರಿಯಪ್ಪ, ಅಶೋಕ್‌ಗೌಡ, ಪುರಸಭಾ ಮಾಜಿ ಸದಸ್ಯ ಎಂ. ಚೇತನ್‌ಕುಮಾರ್, ಒಕ್ಕಲಿಗ ಸಮಾಜದ ಮಹಾಲಿಂಗಪ್ಪ,
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ, ಗ್ರಾಪಂ ಅಧ್ಯಕ್ಷ ಬಿ.ಆನಂದ್‌ಕುಮಾರ್, ಸದಸ್ಯ ಬಿ.ಷಣ್ಮುಖಪ್ಪ,
ನಿವೃತ್ತ ಅಧಿಕಾರಿ ಶಿವಮೂರ್ತಪ್ಪ, ದ್ಯಾವರಹಳ್ಳಿ ತಿಪ್ಪೇಸ್ವಾಮಿ, ಕೆ.ಪಿ.ಮೋಹನ್‌ಕುಮಾರ್, ಹೊರಕೆರೆ ರಂಗಸ್ವಾಮಿ, ಮೂಡಲಗಿರಿಯಪ್ಪ, ತಿಪ್ಪೇರುದ್ರಪ್ಪ, ಜಗದೀಶ್, ಚನ್ನಾಗನಹಳ್ಳಿ ರುದ್ರಮುನಿ, ಭರಂಪುರ ಮಲ್ಲಣ್ಣ, ಸ್ವಾಮಿ ಇತರರಿದ್ದರು.