ಕೆಪಿಎಸ್ಸಿ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳ ಪರದಾಟ

FotoJet
Published on

ಕೋಲಾರ: ನಗರದಲ್ಲಿ ಭಾನುವಾರ ಕೆಪಿಎಸ್‌ಸಿ ನಿಗದಿಪಡಿಸಿದ್ದ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆಯಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಪರಿಕ್ಷಾರ್ಥಿಗಳು ಆಕ್ರೊಶ ವ್ಯಕ್ತಪಡಿಸಿದರು.

ಒಎಂಆರ್ ಶೀಟ್‌ನಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಬದಲಾಗಿದ್ದ ಕಾರಣ ಪರೀಕ್ಷಾರ್ಥಿಗಳು ಮತ್ತು ಅಧಿಕಾರಿಗಳ ಮಧ್ಯೆ ವಾತಿನ ಚಕಮಕಿ ನಡೆದು ಕಡೆಗೆ ಅಭ್ಯರ್ಥಿಗಳಿಂದಲೇ ನೋಂದಣಿ ಸಂಖ್ಯೆ ಬರೆಸಿ ಪರೀಕ್ಷೆ ಬರೆಯಿಸಲಾಯಿತು. ಈ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಬಾಲಕರ ಕಾಲೇಜು ಮತ್ತು ಮಹಿಳಾ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಆರಂಭವಾಯಿತು.

ಪರೀಕ್ಷೆಯಿಂದ ಹೊರಬಂದ ಪರೀಕ್ಷಾರ್ಥಿಗಳು ಪ್ರವೇಶ ಪತ್ರದ ಸಂಖ್ಯೆ ಒಎಂಆರ್ ಶೀಟ್‌ನಲ್ಲಿ ಇರಲಿಲ್ಲ. ಇದನ್ನು ಪ್ರಶ್ನೆ ವಾಡಿದಾಗ ಪರೀಕ್ಷಾ ಕೇಂದ್ರದ ಅಭ್ಯರ್ಥಿಗಳು ಅದನ್ನು ಸರಿಪಡಿಸಿಕೊಂಡು ಬರೆಯಿರಿ ಇಲ್ಲ, ಎದ್ದು ಹೋಗಿ ಎಂದು ಧಮ್ಕಿ ಹಾಕಿದರೆಂದು ಆರೋಪಿಸಿದ್ದಾರೆ.

ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಒಟ್ಟು 5,718 ಮಂದಿ ನೋಂದಣಿ ವಾಡಿಸಿದ್ದು, 2,923 ಮಂದಿ ಗೈರಾದರು.

ಮತ್ತೊಮ್ಮೆ ಮರುಪರೀಕ್ಷೆ ನಡೆಸಿ: ಈ ಬಾರಿಯೂ ಯಾರದೋ ಪರೀಕ್ಷೆಯನ್ನು ಇನ್ಯಾರಿಂದಲೋ ಬರೆಸುತ್ತಿದ್ದಾರೆ ಎಂಬ ಅನುವಾನ ವ್ಯಕ್ತಪಡಿಸಿದ ಪರೀಕ್ಷಾರ್ಥಿಗಳು, ಈ ಬಾರಿಯೂ ಯಶಸ್ವಿಯಾಗಿ ಪರೀಕ್ಷೆ ನಡೆಸುವಲ್ಲಿ ಕೆಪಿಎಸ್‌ಸಿ ವಿಫಲವಾಗಿದೆ. ಜಿಲ್ಲೆಯ ನಾಲ್ಕೈದು ಪರೀಕ್ಷಾ ಕೇಂದ್ರಗಳಲ್ಲಿ ಸಮಸ್ಯೆ ಉಂಟಾಗಿದೆ. ಇದರಿಂದ ನೂರಾರು ವಿದ್ಯಾರ್ಥಿಗಳು ಪರಿದಾಡುವ ಸ್ಥಿತಿ ನಿರ್ವಾಣವಾಗಿದೆ. ನಮ್ಮ ಸಮಸ್ಯೆ ಆಲಿಸಲು ಸ್ಥಳದಲ್ಲಿ ಯಾವೊಬ್ಬ ಅಧಿಕಾರಿಗಳೂ ಇರಲಿಲ್ಲ. ನಮಗೆ ಅನ್ಯಾಯವಾಗಿದೆ ಎಂದು ‘ವಿಜಯವಾಣಿ’ ಜತೆ ಅಲವತ್ತುಕೊಂಡ ಪರೀಕ್ಷಾರ್ಥಿಗಳು, ಮತ್ತೊಮ್ಮೆ ಮರುಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net