3 ವಿಧಾನಸಭೆ ಕ್ಷೇತ್ರಗಳಿಗೆ ಪ್ರತಿನಿಧಿಗಳ ನೇಮಕ

abbayya prasad
Published on

ಹುಬ್ಬಳ್ಳಿ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬೂತ್ ಮಟ್ಟದಲ್ಲಿ ಏಜೆಂಟ್​ರನ್ನು ನೇಮಿಸಲು ಧಾರವಾಡ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪಕ್ಷದ ಅಧಿಕೃತ ಪ್ರತಿನಿಧಿಗಳನ್ನು ನೇಮಿಸಿದೆ.

ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಪ್ರಸಾದ ಅಬ್ಬಯ್ಯ, ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಹಾಗೂ ಹು-ಧಾ ಪಶ್ಚಿಮಕ್ಕೆ ದೀಪಕ ಚಿಂಚೋರೆ ನೇಮಕಗೊಂಡಿದ್ದಾರೆ.

ಬೂತ್ ಮಟ್ಟದಲ್ಲಿ ಪಕ್ಷದ ವತಿಯಿಂದ ಮತದಾರರ ಪಟ್ಟಿಯ ಕರಡು ಪ್ರತಿ, ಅಂತಿಮ ಪಟ್ಟಿಯನ್ನು ಸ್ವೀಕರಿಸುವ ಜವಾಬ್ದಾರಿಯನ್ನು ಬೂತ್ ಮಟ್ಟದ ಏಜೆಂಟ್​ಗಳಿಗೆ ಇರುತ್ತದೆ. ಇವರನ್ನು ನೇಮಿಸುವ ಅಧಿಕಾರ ಅಧಿಕೃತ ಪ್ರತಿನಿಧಿಗಳಿಗೆ ಇರುತ್ತದೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net