ಕೌಡ್ಲೆ ಗ್ರಾಪಂಗೆ ಪುಟ್ಟಸ್ವಾಮಿ ನೂತನ ಅಧ್ಯಕ್ಷ: ಉಪಾಧ್ಯಕ್ಷೆಯಾಗಿ ಅಂಜನಾಕುಮಾರಿ ಅವಿರೋಧ ಆಯ್ಕೆ

Kowdle Gram Panchayat Election Mandya
Published on

ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮ ಪಂಚಾಯಿತಿಯ ನೂತನ ವರಿಷ್ಠರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಬೆಂಬಲಿಗರಾದ ತರಮನಕಟ್ಟೆಯ ಪುಟ್ಟಸ್ವಾಮಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷೆಯಾಗಿ ಕೌಡ್ಲೆ ಅಂಜನಾಕುಮಾರಿ ಅವಿರೋಧವಾಗಿ ಆಯ್ಕೆಯಾದರು.

ಅವಿಶ್ವಾಸ ಸಾಬೀತಾದರಿಂದ ಸಿ.ಪ್ರೇಮ್‌ಕುಮಾರ್ ಅವರು ಅಧ್ಯಕ್ಷ ಸ್ಥಾನದಿಂದ ಹಾಗೂ ಉಪಾಧ್ಯಕ್ಷ ಸ್ಥಾನದಿಂದ ಇಂದ್ರಮ್ಮ ಅವರನ್ನು ಪದಚ್ಯುತಿಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ನೂತನ ವರಿಷ್ಠರ ಆಯ್ಕೆಗೆ ಮಂಗಳವಾರ ಗ್ರಾಪಂ ಕಚೇರಿಯಲ್ಲಿ ಚುನಾವಣೆ ನಿಗದಿಯಾಗಿತ್ತು. 12 ಸದಸ್ಯ ಬಲದ ಗ್ರಾಪಂನಲ್ಲಿ ಎಂಟು ಸದಸ್ಯರು ಚುನಾವಣೆಯಲ್ಲಿ ಭಾಗಿಯಾದರು. ಇತ್ತ ಅಧ್ಯಕ್ಷ ಸ್ಥಾನಕ್ಕೆ ಪುಟ್ಟಸ್ವಾಮಿ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಅಂಜನಾಕುಮಾರಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಆದ್ದರಿಂದ ಚುನಾವಣಾಧಿಕಾರಿಯೂ ಆದ ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮಾರ್ಗದರ್ಶನ ಹಾಗೂ ಎಲ್ಲ ಸದಸ್ಯರು, ಗ್ರಾಮಸ್ಥರ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸವನ್ನು ಮಾಡಲಾಗುವುದು. ಜನರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ವರಿಷ್ಠರನ್ನು ಸದಸ್ಯರಾದ ಲೋಕೇಶ್, ಮನು, ವೆಂಕಟೇಶ್, ಮಹಾಲಕ್ಷ್ಮೀ, ಸಾಕಮ್ಮ, ರತ್ನಮ್ಮ, ಸಚಿವ ಸಿಆರ್‌ಎಸ್ ಬೆಂಬಲಿಗರಾದ ಎಂ.ಶಿವರಾಮು, ಕೆ.ಸಿ.ಶ್ರೀನಿವಾಸ್, ಡಿ.ರಮೇಶ್ ಗಟ್ಟಹಳ್ಳಿ, ಕೆ.ಸಿ.ಶ್ರೀಧರ್, ಎಂ.ನಾರಾಯಣಗೌಡ, ಎಚ್.ಚನ್ನಪ್ಪ, ಮಂಚಯ್ಯ, ಸುಂದ್ರೇಶ್, ಜಯರಾಮ, ಎನ್.ರಮೇಶ್ ಇತರರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net