

ಶಿರಹಟ್ಟಿ: ಕರೊನಾ ನಿಯಮ ಪಾಲನೆಯೊಂದಿಗೆ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಹೋಳಿ ಹಬ್ಬವನ್ನು ಶಾಂತಿ, ಸೌಹಾರ್ದದಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಎಸ್.ಕೆ. ಪ್ರಹ್ಲಾದ ಹೇಳಿದರು.
ಹೋಳಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಶಿರಹಟ್ಟಿ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸಾರ್ವಜನಿಕರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಸಮುದಾಯದ ಜನತೆ ಹೋಳಿ ಆಚರಣೆಯಲ್ಲಿ ಪಾಲ್ಗೊಳ್ಳಬೇಕು. ನೈಸರ್ಗಿಕ ಬಣ್ಣ ಉಪಯೋಗಿಸಿ ಶಾಂತಿಯುತವಾಗಿ ಹಬ್ಬ ಸಂಪನ್ನಗೊಳಿಸಬೇಕು ಎಂದರು.
ಸಿಪಿಐ ವಿಕಾಸ ಲಮಾಣಿ ಮಾತನಾಡಿ, ಭಾನುವಾರ ರಾತ್ರಿ ಇಡೀ ನಡೆಯುವ ಹುಲಗಾಮನ ಮೆರವಣಿಗೆ, ಸೋಮವಾರದ ಬಣ್ಣದಾಟದ ವೇಳೆ ಅಹಿತಕರ ಘಟನೆ ನಡೆಯದಂತೆ ಹಬ್ಬ ಆಚರಿಸಿ ಎಂದರು.
ಪಪಂ ಸದಸ್ಯ ಮಂಜುನಾಥ ಘಂಟಿ, ಮಾಬುಸಾಬ್ ಲಕ್ಷ್ಮೇಶ್ವರ, ಕರವೇ ಸಂಘಟನೆ ಅಧ್ಯಕ್ಷ ಬಸವರಾಜ ವಡವಿ, ಸೋಮನಗೌಡ ಮರಿಗೌಡ್ರ ಮಾತನಾಡಿದರು.
ಪೊಲೀಸ್ ಪೇದೆ ಸಿದ್ದು ನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ವೈ.ಎಸ್. ಪಾಟೀಲ, ಸಿ.ಕೆ. ಮುಳಗುಂದ, ಜಾನು ಲಮಾಣಿ, ಪಪಂ ಉಪಾಧ್ಯಕ್ಷ ಮಹ್ಮದ್ಇಸಾಕ್ ಆದ್ರಳ್ಳಿ, ಸದಸ್ಯ ಹೊನ್ನಪ್ಪ ಶಿರಹಟ್ಟಿ, ಮುಶ್ತಾಕ ಚೋರಗಸ್ತಿ, ಮಹಾಂತೇಶ ದಶಮನಿ, ಪರಶುರಾಮ ಲೋಹಾರ, ಮಂಜುನಾಥ ಹುಬ್ಬಳ್ಳಿ, ಪರಶುರಾಮ ಡೊಂಕಬಳ್ಳಿ, ಫಕೀರೇಶ ಲಮಾಣಿ, ಗಣೇಶ ಗ್ರಾಮ ಪುರೋಹಿತ, ಬಸಯ್ಯ ಮಠಪತಿ ಇತರರಿದ್ದರು.