

ಹೊನ್ನಾಳಿ: ಮನೆಯೇ ಮಂತ್ರಾಲಯ ಎಂಬ ಪೂರ್ವಜರ ಮಾತಿನಂತೆ ನಾವು ಮನೆಯಲ್ಲಿದ್ದರೆ ಯಾವುದೇ ಸೋಂಕು ಬರುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಮಾದೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು. ಗ್ರಾಮದಿಂದ ಅನಗತ್ಯವಾಗಿ ಪಟ್ಟಣಕ್ಕೆ ಬರಬೇಡಿ. ಅನಾರೋಗ್ಯ ಆಹಾರ ಸಾಮಗ್ರಿ, ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ಜರೂರು ಇದ್ದರೆ ಮಾತ್ರ ಪಟ್ಟಣಕ್ಕೆ ಬನ್ನಿ. ಇಲ್ಲವಾದರೆ ಮನೆಯಲ್ಲೇ ಇರಿ ಎಂದು ಮನವಿ ಮಾಡಿದರು.
ಕರೊನಾ ಇಡೀ ಜಗತ್ತಿಗೆ ಹರಡಿದೆ. ಇದರಿಂದ ಯಾರೂ ಗಾಬರಿಪಡದೆ ಮನೆಯಲ್ಲಿರಬೇಕು. ಮಹಾರಾಷ್ಟ್ರದಿಂದ ಗ್ರಾಮಕ್ಕೆ ಬಂದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಆತನ ಬಗ್ಗೆ ತಪ್ಪು ಕಲ್ಪನೆ ಬೇಡ. ಆತನ ತಾಯಿ, ಸಹೋದರನನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.
ತಾಪಂ ಸದಸ್ಯೆ ಗಿರಿಜಮ್ಮ, ಗ್ರಾಪಂ ಸದಸ್ಯರಾದ ನಾಗರಾಜಪ್ಪ, ಕುಬೇರಪ್ಪ, ಶೇಖರಪ್ಪ, ಡಾ.ಮಲ್ಲಿಕಾಜುವನ್, ಪಿಡಿಒ ಮಂಗಳೇಶನಾಯ್ಕ ಇತರರಿದ್ದರು.