ಶ್ರೀ ಸಿದ್ಧಾರೂಢಸ್ವಾಮಿಗೆ ಕೌದಿ ಪೂಜೆ ಇಂದು

3-HBL-11 SIDHARUDHA KOUDI PUJE
Published on

ವಿರೂಪಾಕ್ಷಯ್ಯ ಗುದ್ನ್ಯಯವರಮಠ ಹುಬ್ಬಳ್ಳಿ

ಶ್ರೀ ಸಿದ್ಧಾರೂಢಸ್ವಾಮಿಗಳ ಮಠದ 2022ನೇ ವರ್ಷದ ಶಿವರಾತ್ರಿ ಮಹೋತ್ಸವದ ಅಂಗವಾಗಿ ಮಾ. 4ರಂದು ಸಂಜೆ 6 ಗಂಟೆಗೆ ಕೌದಿ ಪೂಜೆ ನೆರವೇರಲಿದೆ. ಇದಕ್ಕೂ ಮುನ್ನ ಬೆಳಗ್ಗೆ ಭಕ್ತರು ನೀಡಿದ, ಶ್ರೀಮಠದಿಂದ ತಯಾರಿಸಿದ ವಿವಿಧ ಬಗೆಯ ಕೌದಿಗಳಿಂದ ಶ್ರೀಮಠದಲ್ಲಿನ ಸಿದ್ಧಾರೂಢರ ಮೂರ್ತಿ, ಶ್ರೀ ಗುರá-ನಾಥರೂಢರ ಮೂರ್ತಿಗಳಿಗೆ ಅಲಂಕಾರ ಮಾಡಲಾಗá-ತ್ತದೆ.

ಆಡಂಬರವಿಲ್ಲದ ಸಹಜ ಬದá-ಕು ನಡೆಸಿದ್ದ ಶ್ರೀ ಸಿದ್ಧಾರೂಢರು ಬಿಳಿ ಬಣ್ಣದ ಧಡಿ ಧೋತ್ರ ಧರಿಸá-ತ್ತಿದ್ದರು. ಅದರಂತೆ ಮಲಗá-ವಾಗ ಕೌದಿ ಹೊದ್ದುಕೊಳ್ಳುತ್ತಿದ್ದರು. ಶ್ರೀಗಳ ಸರಳ ಬದá-ಕಿನ ಪ್ರತೀಕವಾಗಿ ಜಾತ್ರೆ ಮಹೋತ್ಸವ ಕೊನೆಯ ಘಟ್ಟದಲ್ಲಿ ಕೌದಿ ಪೂಜೆ ನೆರವೇರಿಸಲಾಗá-ತ್ತದೆ ಎನ್ನುತ್ತಾರೆ ಶ್ರೀ ಸಿದ್ಧಾರೂಢಮಠದ ಟ್ರಸ್ಟ್ ಕಮಿಟಿ ಚೇರ್ಮನ್ ದೇವೇಂದ್ರಪ್ಪ ಮಾಳಗಿ ಅವರು.

ಸಿದ್ಧಾರೂಢರ ಜನನ: ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ 1836ರ ಮಾ. 26ರಂದು ಗá-ರá-ಶಾಂತಪ್ಪ ಹಾಗೂ ದೇವಮಲ್ಲಮ್ಮ ಶಿವದಂಪತಿಯ ಮೂರನೇ ಸುಪುತ್ರರಾಗಿ ಜನಿಸಿದರು. ಅದ್ವೈತ ಜ್ಞಾನ ಸರ್ವಾತ್ಮಕ ಭಾವದಿಂದ ಕೂಡಿದ ಬಾಲಕ ಸಿದ್ಧರನ್ನು ಗಜದಂಡ ಶಿವಯೋಗಿಗಳು ‘ಶ್ರೀ ಸಿದ್ಧಾರೂಢ ಭಾರತಿ ಎಂಬ ನಾಮದಿಂದ ಕರೆದು, ಅವಧೂತಾಶ್ರಮ ದೀಕ್ಷೆ ನೀಡಿದರು. ಆತ್ಮಸಾಕ್ಷಾತ್ಕಾರದ ಮಾರ್ಗ ಕುರಿತು ಮತ್ತು ಶಿವ ಪಂಚಾಕ್ಷರಿ ಮಂತ್ರ ಉಪದೇಶಿಸಲು ಅಪ್ಪಣೆ ಕೊಡಿಸಿದರು. ಮುಂದೆ ಸಿದ್ಧಾರೂಢರು ದೇಶ ಸಂಚಾರಗೈಯá-ತ್ತ ಅದ್ವೈತ ದುಂದá-ಭಿ ಮೊಳಗಿಸಿದರು. ಲಕ್ಷಾಂತರ ಭಕ್ತರ ದುಃಖ ನಿವಾರಿಸಿದರು. 1877ರಲ್ಲಿ ಸಾಧು, ಸಂತರ ನಾಡು ಹುಬ್ಬಳ್ಳಿಗೆ ಆಗಮಿಸಿದರು. ಬಡಕಲು ಶರೀರವುಳ್ಳ ಶ್ರೀಗಳು ಭಕ್ತರಿಂದ ಏನನ್ನೂ ಅಪೇಕ್ಷಿಸದೇ ಜನರೊಡನೆ ಒಂದಾಗಿ ಅವರಿಗೆ ಅದ್ವೈತ ಬೋಧಿಸಿದರು. ಹಲವು ಲೀಲೆ, ಪವಾಡಗಳನ್ನು ಮಾಡಿ ಭಕ್ತರನ್ನು ಆಶ್ಚರ್ಯಚಕಿತಗೊಳಿಸಿದರು. ಸಿದ್ಧಾರೂಢರ ನಿರಭಿಮಾನತ್ವ, ಜಾತ್ಯತೀತ ಭಾವ, ನಾವೆಲ್ಲರೂ ಒಂದೇ ಭಾವವನ್ನು ಕಂಡ ಅನೇಕ ಧರ್ಮಗಳ ಭಕ್ತರು ಶ್ರೀಗಳ ಶಿಷ್ಯರಾದರು.

ಬಳಿಕ ಭಕ್ತರೇ ಕಾಣಿಕೆ ಸಂಗ್ರಹಿಸಿ ಮಠವನ್ನು ಕಟ್ಟಿದರು. ಭಕ್ತರ ಏಳಿಗೆಯ್ಲೇ ಪರಮಾನಂದ ಕಾಣá-ತ್ತಿದ್ದ ಶ್ರೀ ಸಿದ್ಧಾರೂಢರು 1929ರ ಸೆ. 21ರಂದು ಬ್ರಹ್ಮೈಕ್ಯರಾದರು. ಅಂದಿನಿಂದ ಶ್ರೀಗಳ ನಿರ್ವಿಕಲ್ಪ ಸಮಾಧಿ ಮಂದಿರದಲ್ಲಿ ಅಹೋರಾತ್ರಿ ‘ಓಂ ನಮಃ ಶಿವಾಯ’ ಮಂತ್ರ ಅವಿರತವಾಗಿ ನಡೆಯá-ತ್ತಿದೆ. ಶ್ರೀಮಠಕ್ಕೆ ಪೀಠಸ್ಥ ಸ್ವಾಮಿಗಳು ಇಲ್ಲದಿದ್ದರೂ ಪೂಜ್ಯರ ಸಮಾಧಿ ದರ್ಶನದಿದಲೇ ಭಕ್ತರ ಇಷ್ಟಾರ್ಥಗಳು ಈಡೇರá-ತ್ತವೆ. ಇಂದಿಗೂ ಶ್ರೀಮಠಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸಿ ಶ್ರೀ ಸಿದ್ಧಾರೂಢರ ದರ್ಶನ ಪಡೆದು ಪುನೀತರಾಗá-ತ್ತಾರೆ.

ದೇಶಪ್ರೇಮಿಯಾಗಿದ್ದ ಶ್ರೀಗಳು: ದೇಶಪ್ರೇಮಿಯಾಗಿದ್ದ ಶ್ರೀ ಸಿದ್ಧಾರೂಢರು ಹುಬ್ಬಳ್ಳಿಯಲ್ಲಿ ಜರá-ಗಿದ ಸ್ವಾತಂತ್ರ್ಯ ಚಳವಳಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿ ಭಾಗವಹಿಸಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರು, ಮಹಾತ್ಮ ಗಾಂಧೀಜಿ ಶ್ರೀಗಳ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು. ಸ್ವಾಮಿ ವಿವೇಕಾನಂದರು, ಶಿರಡಿ ಶ್ರೀ ಬ್ರಹ್ಮ ಚೈತನ್ಯ ಮಹಾರಾಜ ಗೋಂದಾವಲಿ ಹೀಗೆ ಅನೇಕ ಸಂತರು ಸಿದ್ಧಾರೂಢರ ವ್ಯಕ್ತಿತ್ವದಿಂದ ಪ್ರಭಾವಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net