ಕೊಟ್ಟೂರಿನಲ್ಲಿ ಮೂಲ ಸೌಕರ್ಯ ಒದಗಿಸಿ

Untitled design-3
ಕೊಟ್ಟೂರಿನ 5ನೇ ವಾರ್ಡ್ ಓಣಿಯ ಚರಂಡಿ ವ್ಯವಸ್ಥೆ ಮತ್ತು ರಸ್ತೆ ಸಂಪೂರ್ಣ ಹದಗೆಟ್ಟಿರುವುದು.
Published on

ಕೊಟ್ಟೂರು: ಪಟ್ಟಣದ ಉಜ್ಜಿನಿ ಸರ್ಕಲ್ ಬಳಿ 5ನೇ ವಾರ್ಡ್‌ನ ಓಣಿಯ ಚರಂಡಿ ವ್ಯವಸ್ಥೆ ಮತ್ತು ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೊಳಿಸಲು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಚರಂಡಿ ನೀರು ಮನೆಗಳ ಶೌಚಗೃಹ ಗುಂಡಿ ತುಂಬಿ ಮನೆಯಲ್ಲಿ ವಾಸ ಮಾಡದಂತ ಸ್ಥಿತಿ ನಿರ್ಮಾಣವಾಗಿದೆ. ಶೌಚಗೃಹದ ಗುಂಡಿ ನೀರನ್ನು ತಗೆಸಿದರೂ ಮತ್ತೆ ಭರ್ತಿಯಾಗುತ್ತಿದೆ. ಇದಕ್ಕೆ ಸುಖಾಸುಮ್ಮನೆ ಹಣ ವ್ಯಯಿಸುವಂತಾಗಿದೆ. ಇಲ್ಲಿ ಖಾಲಿ ಮನೆಗಳಿದ್ದರೂ ಬಾಡಿಗೆಗೆ ಯಾರೂ ಬರುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ನಿವಾಸಿಗಳಾದ ಬಸವರಾಜೇಶ್ವರಿ, ಕೊಟ್ರೇಶ್, ಲಕ್ಷ್ಮೀ ನಾರಾಯಣ ಇತರರು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net