ವಿದ್ಯಾರ್ಥಿಗಳಿಗೆ ವ್ಯಾಸಂಗವಷ್ಟೇ ಗುರಿಯಾಗಲಿ - ಸಿಪಿಐ ಸೋಮಶೇಖರ ಕೆಂಚರಡ್ಡಿ ಸಲಹೆ

101222 Kotturu Human Rights Day Celebration
Published on

ಕೊಟ್ಟೂರು: ವಿದ್ಯಾರ್ಥಿಗಳು ಕೃತಕ ಆಕರ್ಷಣೆಗೆ ಒಳಗಾಗದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಡಬೇಕು. ವ್ಯಾಸಂಗವಷ್ಟೇ ಗುರಿಯಾಗಬೇಕು ಎಂದು ಸಿಪಿಐ ಸೋಮಶೇಖರ ಕೆಂಚರಡ್ಡಿ ಹೇಳಿದರು.

ಪಟ್ಟಣದ ಗೊರ್ಲಿ ಶರಣಪ್ಪ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಮತ್ತು ಅಪರಾಧ ತಡೆ ಮಾಸಚರಣೆಯಲ್ಲಿ ಮಾತನಾಡಿದರು. ಯಾರಾದರು ಲೈಂಗಿಕ ಕಿರುಕುಳ ನೀಡಿದರೆ, 112ಕ್ಕೆ ಕರೆ ಮಾಡಿದರೆ ತಾವಿದ್ದ ಸ್ಥಳಕ್ಕೆ ಕೆಲವೇ ನಿಮಿಷಗಳಲ್ಲಿ ಪೊಲೀಸ್ ಜೀಪ್ ಬರುತ್ತದೆ. ಇದಲ್ಲದೆ ಯಾವುದೇ ರೀತಿಯ ತೊಂದರೆಗೊಳಗಾದರೂ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬಹುದು ವಿದ್ಯಾರ್ಥಿನಿಯರು ಹೇಳಿದರು.

ಉಪನ್ಯಾಸಕ ಮುನೇಗೌಡ್ರು ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮದೇ ಆದ ಹಕ್ಕು ಮತ್ತು ಕರ್ತವ್ಯಗಳಿದ್ದು, ಅವುಗಳನ್ನು ದುರುಪಯೋಗ ಪಡಿಸಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪಿಎಸ್‌ಐ ವಿಜಯಕೃಷ್ಣ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಡಾ.ಜಿ. ಸೋಮಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಅಧಿಕಾರಿ ಶಿವಕುಮಾರ್, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉಪನ್ಯಾಸಕ ಜಗದೀಶ ಚಂದ್ರಬೋಸ್ ಸ್ವಾಗತಿಸಿ, ನಿರೂಪಿಸಿದರು. ಡಿ.ಅಂಜಿನಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net