ಶ್ರೀ ಕೊಟ್ಟೂರೇಶ್ವರ ಸ್ವಾಮಿ ಕಾಣಿಕೆ ಹುಂಡಿಯಲ್ಲಿ 63 ಲಕ್ಷ ರೂ.ಸಂಗ್ರಹ

091122 Kotturu Temple Hundi Counting
ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಕಾಣಿಕೆ ಹುಂಡಿ ಎಣಿಕೆ ಮಂಗಳವಾರ ರಾತ್ರಿ ಮುಕ್ತಾವಾಯಿತು.
Published on

ಕೊಟ್ಟೂರು: ಪಟ್ಟಣದ ಶ್ರೀ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ನ ಹಣ ಎಣಿಕೆ ಮಾಡಿದ್ದು, 63 ಲಕ್ಷ, 3 ಸಾವಿರ ರೂ. ಸಂಗ್ರಹವಾಗಿದೆ.

ಈ ಕುರಿತು ಬುಧವಾರ ಮಾಹಿತಿ ನೀಡಿದ ಹಿಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಪ್ರಕಾಶರಾವ್, ಪ್ರಸ್ತುತ ದೇವಸ್ಥಾನದಲ್ಲಿ ಮಂಗಳವಾರ ಬೆಳಗ್ಗೆ ನಾಲ್ಕು ಕಾಣಿಕೆ ಹುಂಡಿಗಳನ್ನು ತೆರೆದು ರಾತ್ರಿ ಎಂಟು ಗಂಟೆಗೆ ಎಣಿಕೆ ಮುಕ್ತಾವಾಯಿತು. ಭಕ್ತರು ಕಾಣಿಕೆಯೊಂದಿಗೆ ಬೇಡಿಕೆಯ ಪತ್ರಗಳನ್ನು ಹಾಕಿದ್ದು ವಿಶೇಷವಾಗಿತ್ತು. ಪತ್ರದಲ್ಲಿ ಐಎಎಸ್ ಕನಸು ಹೊತ್ತವರು, ಪಶು ವೈದ್ಯರಾಗಬೇಕು. ಅಕ್ಕ ಐಎಎಸ್ ಅಧಿಕಾರಿಯಾಗಿ ಆಕೆಗೆ ಉತ್ತಮ ಪತಿ ಸಿಗಬೇಕು. ಚಿಕ್ಕಪ್ಪನಿಗೆ ಕ್ಯಾನ್ಸರ್ ರೋಗಗುಣವಾಗಬೇಕು. ಹೀಗೆ ಅನೇಕ ಬೇಡಿಕೆಗಳ ಚೀಟಿಗಳು ಹುಂಡಿಯಲ್ಲಿ ಪತ್ತೆಯಾದವು ಎಂದು ತಿಳಿಸಿದರು.

ಎಣಿಕೆ ಸಂದರ್ಭ ಉಪ ತಹಸೀಲ್ದಾರ್ ನಾಗರಾಜ, ಪಟ್ಟಣದ ಪ್ರಮುಖರು, ಪ್ರಗತಿಕೃಷ್ಣ ಬ್ಯಾಂಕ್ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಇದ್ದರು. ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ನಂತರ ಶ್ರಾವಣದಲ್ಲಿ ಹುಂಡಿ ಎಣಿಕೆ ಮಾಡಲಾಗಿತ್ತು. ಇದಾದ ಏಳು ತಿಂಗಳ ನಂತರ ನಾಲ್ಕು ಕಾಣಿಕೆ ಹುಂಡಿ ಎಣಿಕೆ ಮಾಡಲಾಗುತ್ತಿದೆ.

ಪ್ರಗತಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಕೆ.ಎಸ್. ನಾಗರಾಜ್ ಗೌಡ ಮತ್ತು ಪ್ರೇಮಾನಂದಗೌಡ, ಸೋಮನಾಥ ಪಾಟೀಲ್, ಸಿಪಿಐ ಸೋಮಶೇಖರ ರಡ್ಡಿ, ಎಎಸ್‌ಐ ಶಿವಕುಮಾರ್ ಪ್ರೇಮಾನಂದ ಗೌಡ, ನಾಗರಾಜ ಗೌಡ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net