ಎಸ್ಸಿ ಮೀಸಲು ಮುಂದುವರಿಸುವಂತೆ ಒತ್ತಾಯಿಸಿ ಪತ್ರ ಚಳವಳಿ

100620 Kotturu Letter Movement for SC Reserve
Published on

ಕೊಟ್ಟೂರು: ಲಂಬಾಣಿ, ಕೊರಮ, ಕೊರಚ, ಭೋವಿ ಸಮುದಾಯಗಳನ್ನು ಎಸ್ಸಿ ಮೀಸಲು ಪಟ್ಟಿಯಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ದೂಪದಹಳ್ಳಿ ತಾಂಡಾದ ಲಂಬಾಣಿ ಸಮುದಾಯದ ಯುವಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಾವಿರ ಅಂಚೆ ಪತ್ರಗಳನ್ನು ಬುಧವಾರ ಪೋಸ್ಟ್ ಮಾಡಿದರು.

ಎಸ್ಸಿ ಮೀಸಲಾತಿ ಪಟ್ಟಿಯಿಂದ ಲಂಬಾಣಿ ಸಮುದಾಯವನ್ನು ಹೊರಗಿಟ್ಟಿದ್ದೇ ಆದರೆ ರಾಜ್ಯದ 3300 ತಾಂಡಾಗಳಲ್ಲಿ ಪ್ರತಿಭಟನೆ ನಡೆಯಲಿದೆ. ಮೊದಲ ಹಂತವಾಗಿ ಅಂಚೆ ಕಾರ್ಡ್ ಚಳವಳಿ ಹಮ್ಮಿಕೊಂಡಿರುವುದಾಗಿ ತಾಂಡದ ಯುವಕರಾದ ಕುಮಂದರ್ ನಾಯ್ಕ, ಸೋಮ್ಲಾನಾಯ್ಕ, ಶಂಕರನಾಯ್ಕ, ದೇವೇಂದ್ರನಾಯ್ಕ, ಪ್ರಕಾಶ ನಾಯ್ಕ, ಸುನೀಲ್ ನಾಯ್ಕ ಮತ್ತು ಗ್ರಾಮಸ್ಥರು ಹೇಳಿದರು.

ಎಸ್ಸಿ ಮೀಸಲಾತಿ ಪಟ್ಟಿಯಿಂದ ಯಾವುದೇ ಕಾರಣಕ್ಕೂ ಲಂಬಾಣಿ ಜನಾಂಗವನ್ನು ಹೊರಗಿಡುವ ಚಿಂತನೆಯನ್ನು ಎಸ್‌ಸಿ ಆಯೋಗ ತಕ್ಷವೇ ಕೈ ಬಿಡಬೇಕು. ಇಲ್ಲವಾದರೆ ಎಲ್ಲ ಲಂಬಾಣಿ ತಾಂಡಾದಿಂದ ವಿಧಾನ ಸೌಧಕ್ಕೆ ಪಾದಯಾತ್ರೆ ಹಮ್ಮಿಕೊಳ್ಳುವ ಚಿಂತನೆ ಇದೆ. ಈ ಕುರಿತು ರಾಜ್ಯದ ಎಲ್ಲ ತಾಂಡಾದಲ್ಲಿ ಚಿಂತನೆ ಮತ್ತು ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net