ಒಂದು ಲಕ್ಷ ಸದಸ್ಯತ್ವ ಮಾಡಿಸುವ ಸಂಕಲ್ಪ

Kottur Chennamma Circle inguration
ಕೊಟ್ಟೂರಿನಲ್ಲಿ ಭಾನುವಾರ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಅನ್ನು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಉದ್ಘಾಟಿಸಿದರು. ಪ್ರಮುಖರಾದ ಚಾಪಿ ಚಂದ್ರಪ್ಪ, ಹಳ್ಳಿ ಅಶೋಕ, ಬಸಾಪುರ ಪಂಚಾಪತಿ, ಡಾ.ರಾಕೇಶ, ನಿಂಬಳಗೆರೆ ಕಲ್ಲೇಶಪ್ಪ,ಕಂದಗಲ್ಲು ನೀಲಕಂಠಪ್ಪ, ವಕೀಲ ಬಾವಿಕಟ್ಟಿ ಶಿವಾನಂದ, ತೋಟದ ರಾಮಣ್ಣ, ಭಾರತಿ ಸುಧಾಕರ ಪಾಟೀಲ್, ವೀಣಾ ವಿವೇಕಾನಂದ, ಜಿ.ಸಿದ್ದಯ್ಯ ಇತರರಿದ್ದರು.
Published on

ಕೊಟ್ಟೂರು : ಯಾವುದೇ ಫಲಾಪೇಕ್ಷೆ ಇಲ್ಲದೆ ಪಂಚಮಸಾಲಿ ಸಮಾಜವನ್ನು ಒಗ್ಗೂಡಿಸಲು ಶ್ರಮಿಸಲಾಗುವುದು ಎಂದು ಪಂಚಮಸಾಲಿ ಹರಿಹರ ಪೀಠದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಘಟಕ ಹಮ್ಮಿಕೊಂಡಿದ್ದ ಮರಿಕೊಟ್ಟೂರೇಶ್ವರ ದೇವಾಲಯದ ಸರ್ಕಲ್‌ಗೆ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ ಹಾಗೂ ವಧು-ವರರ ಅನ್ವೇಷಣಾ ಕೇಂದ್ರ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಈಗಾಗಲೇ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದೇನೆ. ಸಮಾಜದ ಒಳಿತಿಗಾಗಿ ಶ್ರಮಿಸಲಾಗುವುದು ಎಂದರು.

ಚಿತ್ರದುರ್ಗದಲ್ಲಿ ಡಿ.14ರಂದು ರಾಜ್ಯಮಟ್ಟದ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿದೆ. ಇನ್ನೆರಡು ವರ್ಷದಲ್ಲಿ 1 ಲಕ್ಷ ಪಂಚಮಸಾಲಿ ಸದಸ್ಯತ್ವ ಮಾಡಿಸುವ ಸಂಕಲ್ಪ ಮಾಡಲಾಗಿದೆ. ಪಂಚಮಸಾಲಿ ಸಮಾಜದ 25 ಶಾಸಕರನ್ನು ವಿಧಾನಸೌಧದಲ್ಲಿ ಕೂಡಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ಪ್ರತಿ ಹಳ್ಳಿ, ಪಟ್ಟಣ, ನಗರಗಳನ್ನು ಸುತ್ತಿ ಸಮಾಜವನ್ನು ಸಂಘಟಿಸಲಾಗುವುದು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 3.5 ಲಕ್ಷ ಪಂಚಮಸಾಲಿ ಸಮಾಜವಿದೆ. ಆದರೆ ಒಂದು ಬಾರಿಯೂ ಸಮುದಾಯದವರು ಎಂಪಿ ಆಗಿಲ್ಲ. ಕೇವಲ ಶೇ.2 ಇರುವ ಬ್ರಾಹ್ಮಣರು ಎಂಪಿಯಾಗಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ ಎಂದರು.

ಪಂಚಮಸಾಲಿ ವಿಜಯನಗರ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಟ್ಟೂರು ತಾಲೂಕು ಘಟಕದ ಅಧ್ಯಕ್ಷ ಚಾಪಿ ಚಂದ್ರಪ್ಪ, ಕಾರ್ಯದರ್ಶಿ ಹಳ್ಳಿ ಅಶೋಕ, ಬಸಾಪುರ ಪಂಚಾಪತಿ, ಡಾ.ರಾಕೇಶ. ನಿಂಬಳಗೆರೆ ಕಲ್ಲೇಶಪ್ಪ, ಕಂದಗಲ್ಲು ನೀಲಕಂಠಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net