12ರಂದು ಲಕ್ಷದೀಪೋತ್ಸವ-ಬೆಳ್ಳಿ ರಥೋತ್ಸವ: ಪೂರ್ವಭಾವಿ ಸಭೆಯಲ್ಲಿ ಡಿವೈಎಸ್ಪಿ ಹರೀಶ ಮಾಹಿತಿ

071222 Kotturu ShantiSabhe
ಕೊಟ್ಟೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಡಿ.ವೈ.ಎಸ್ಪಿ ಹರೀಶ ರಡ್ಡಿ ಮಾತನಾಡಿದರು.
Published on

ಕೊಟ್ಟೂರು: ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ಹಾಗೂ ಬೆಳ್ಳಿ ರಥೋತ್ಸವ ಡಿ.12ರಂದು ನಡೆಯಲಿದೆ ಎಂದು ಡಿ.ವೈ.ಎಸ್.ಪಿ. ಹರೀಶ ಹೇಳಿದರು.

ಲಕ್ಷ ದೀಪೋತ್ಸವ ಮತ್ತು ಬೆಳ್ಳಿ ರಥೋತ್ಸವ ನಿಮಿತ್ತ ದೇವಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿ ಹಾಗೂ ಸಮಾಜದಲ್ಲಿ ಶಾಂತಿ ಸೌಹಾದರ್ ರೂಪಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಮದ್ಯದಂಗಡಿಗಳನ್ನು ಡಿ.12ರ ಬೆಳಗ್ಗೆ 10 ಗಂಟೆಯಿಂದ ಮರುದಿವಸ 10 ಗಂಟೆ ತನಕ ಬಂದ್ ಮಾಡಿಸಬೇಕು. ಕಾರ್ತಿಕೋತ್ಸವದಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಿರಲಿ. ಕಾರ್ತೀಕೋತ್ಸವ ಬಂದೋಬಸ್ತಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಹರ್ಷವರ್ಧನ, ಜಿಪಂ ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಮಂಜುನಾಥ ಗೌಡ್ರ, ಹನುಮಂತಪ್ಪ, ದುರುಗೇಶ, ಟಿ. ಕೊಟ್ರೇಶ ಮಾತನಾಡಿದರು.

ಸಿಪಿಐ ಸೋಮಶೇಖರ ಕೆಂಚರಡ್ಡಿ ಸ್ವಾಗತಿಸಿದರು. ಧಾರ್ಮಿಕ ದತ್ತಿ ಇಲಾಖೆ ಇಒ ಕೃಷ್ಣಪ್ಪ ವಂದಿಸಿದರು. ಪಿಎಸ್‌ಐ ವಿಜಯಕೃಷ್ಣ, ವಿದ್ಯುತ್ ಇಲಾಖೆ ಇಂಜಿನಿಯರ್ ಎಸ್. ಚೇತನ್ ಕುಮಾರ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net