ಕೊಟ್ಟೂರಿನಲ್ಲಿ ಹಳೇ ಮನೆಯ ಮಾಳಿಗೆ ಕುಸಿದು ಕಾರ್ಮಿಕ ಸಾವು

220220 Kotturu Roof Collaps Labor Death
Published on

ಕೊಟ್ಟೂರು: ಪಟ್ಟಣದ ಉಜ್ಜಿನಿ ಸರ್ಕಲ್ ಹತ್ತಿರ ಮನೆ ಮಾಳಿಗೆ ಕುಸಿದು ಕೂಲಿ ಕಾರ್ಮಿಕನಾದ ಹುಣಸಿಕಟ್ಟೆ ಗ್ರಾಮದ ಅಂಜಿನಪ್ಪ (38) ಶನಿವಾರ ಮೃತಪಟ್ಟಿದ್ದಾರೆ. ಮನೆ ಮಾಲೀಕ ಶಿವಮೂರ್ತಪ್ಪ, ತನ್ನ ಹಳೆಯಕಾಲದ ಮಾಳಿಗೆ ಮನೆ ಕೆಡವುವಾಗ ಈ ಘಟನೆ ನಡೆದಿದ್ದು, ಇತರೆ ಕಾರ್ಮಿಕರು ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಆಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಮನೆಯಡಿ ಸಿಲುಕಿದ್ದ ಅಂಜಿನಪ್ಪನ ಶವವನ್ನು ಹೊರ ತೆಗೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net