ಕೊಟ್ಟೂರಿನ ಲೊಟ್ಟನಕೆರೆ ಗ್ರಾಮದಲ್ಲಿ ಕುಡಿಯಲು ನೀರು ಸಿಗದೆ ಕೋತಿ ಸಾವು

Kotturu Lottanakere Monkey Death
Published on

ಕೊಟ್ಟೂರು: ತಾಲೂಕಿನ ಲೊಟ್ಟನಕೆರೆ ಗ್ರಾಮದಲ್ಲಿ ಬಿಸಿಲ ತಾಪಮಾನ ಜತೆಗೆ ಕುಡಿಯಲು ನೀರು ಸಿಗದೆ ಕೋತಿಯೊಂದು ಶುಕ್ರವಾರ ಸತ್ತಿದೆ. ಲೊಟ್ಟನಕೆರೆ ಮತ್ತು ಹ್ಯಾಳ್ಯಾ ಗ್ರಾಮದ ತೋಟ ಹಾಗೂ ಹೊಲಗಳಲ್ಲಿ ಬೀಡು ಬಿಟ್ಟಿರುವ ಕೋತಿಗಳಿಗೆ ಆಹಾರ ಹಾಗೂ ನೀರಿನ ಅಭಾವ ಉಂಟಾಗಿದೆ. ಮೂರು ದಿನಗಳ ಹಿಂದೆ ನಾಲ್ಕು ಮಂಗಗಳಿಗೆ ಕುಡಿವ ನೀರು ಸಿಗದೆ ಪ್ರಜ್ಞೆ ಕಳೆದುಕೊಂಡಿದ್ದವು. ಕೊಟ್ಟೂರು ಪಶು ವೈದ್ಯಾಧಿಕಾರಿ ಡಾ.ರವಿ ಪ್ರಕಾಶ್ ಕಿತ್ತೂರು, ಕೋತಿಗಳಿಗೆ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದವು. ಆದರೆ ಶುಕ್ರವಾರ ಕುಡಿವ ನೀರು ಸಿಗದೆ ಕೋತಿಯೊಂದು ಸತ್ತಿದೆ. ಸ್ಥಳಕ್ಕೆ ತಹಸೀಲ್ದಾರ್ ಅನಿಲ್ ಕುಮಾರ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ನೀರಿಲ್ಲದೆ ಕೋತಿ ಸತ್ತಿದೆ ಎಂದು ಶಂಕಿಸಲಾಗಿದೆ. ಮೃತ ಮಂಗದ ಅಂಗಗಳನ್ನು ಹೆಚ್ಚಿನ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಳಿಕ ನಿಖರ ಮಾಹಿತಿ ತಿಳಿಯುತ್ತದೆ ಎಂದು ಪಶು ವೈದ್ಯಾಧಿಕಾರಿ ರವಿ ಪ್ರಕಾಶ್ ಕಿತ್ತೂರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net