ಜನರನ್ನು ವಂಚಿಸಿದೆ ಕಾಂಗ್ರೆಸ್- ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ನೇಮಿರಾಜ್ ನಾಯ್ಕ ಆರೋಪ

230123 Kotturu BJP Sankalpa Abhiyana
ಕೊಟ್ಟೂರಿನಲ್ಲಿ ಶನಿವಾರ ಏರ್ಪಡಿಸಿದ್ದಿ ಬಿಜೆಪಿ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಹಗರಿಬೊಮ್ಮನಹಳ್ಳಿ ಮಂಡಳ ಅಧ್ಯಕ್ಷ ವೀರೇಶ್ ಸ್ವಾಮಿ ಚಾಲನೆ ನೀಡಿದರು.
Published on

ಕೊಟ್ಟೂರು: ಕಾಂಗ್ರೆಸ್ ಸರ್ಕಾರ ಫೇಕ್ ಯೋಜನೆಗಳ ಮೂಲಕ ಜನರನ್ನು ವಂಚಿಸಿದೆ. ಇಂತಹ ಸರ್ಕಾರವನ್ನು ಅಧಿಕಾರಕ್ಕೆ ತರುವುದರಿಂದ ದೇಶ ಉದ್ಧಾರವಾಗದು. ಆದ್ದರಿಂದ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಶಾಸಕ ನೇಮಿರಾಜ್ ನಾಯ್ಕ ಹೇಳಿದರು.

ಗುರುಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಗರಿಬೊಮ್ಮನಹಳ್ಳಿ ಬಿಜೆಪಿ ಮಂಡಲ ಸಮಿತಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಸಂಕಲ್ಪ ಅಭಿಯಾನದಲ್ಲಿ ಮಾತನಾಡಿದರು. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ ವಿರೋಧಿ ಅಲೆ ಇದೆ. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಬಿಜೆಪಿ ಸರ್ಕಾರವಿದೆ. ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿಯ ಶಕೆ ಆರಂಭವಾಗಿದೆ. ಹಿಂದೆ ಯಾವ ದೇಶಗಳು ನಮ್ಮನ್ನು ಮೂದಲಿಸುತ್ತಿದ್ದವೋ ಇಂದು ಅದೇ ದೇಶಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿವೆ ಎಂದರು.

ಹಗರಿಬೊಮ್ಮನಹಳ್ಳಿ ಮಂಡಲ ಅಧ್ಯಕ್ಷ ವೀರೇಶ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕಾಮಶೆಟ್ಟಿ ಕೊಟ್ರೇಶ, ಗೊಲ್ಲರಹಳ್ಳಿ ಉಮ್ಮೇಶ, ಜಯಪ್ರಕಾಶ, ಬಲ್ಲಹುಣಸಿ ರಾಮಣ್ಣ, ಕೃಷ್ಣ ನಾಯ್ಕ, ಜಯಪ್ರಕಾಶ, ವೀರೇಶಗೌಡ, ಬಿ.ಆರ್. ವಿಕ್ರಂ, ಬಾಗಳಿ ಪ್ರೇಮಕ್ಕ, ಜಗದೀಶ,, ಗಡ್ಡಿ ಬಸಪ್ಪ, ಚಿರಬಿ ನಾಗರಾಜ್,ಸುರೇಶ, ನಾಗರಾಜ್ ವೇದಿಕೆಯಲ್ಲಿದ್ದರು. ಪ್ರಕಾಶ ದೊಡ್ಡಮನಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net