ಕೊಟ್ಟೂರಿನಲ್ಲಿ ಮೈ ಮೇಲೆ ಎರಗಿದ ನರಿ; ಪ್ರಾಣ ರಕ್ಷಣೆಗೆ ಪ್ರಾಣಿಯನ್ನು ಹೊಡೆದು ಸಾಯಿಸಿದ ಕುರಿಗಾಹಿ

301020 Kotturu Fox attack Injure Hanumantappa
Published on

ಕೊಟ್ಟೂರು: ತಾಲೂಕಿನ ಹುಣಸಿಕಟ್ಟೆ ಗ್ರಾಮದಲ್ಲಿ ಶುಕ್ರವಾರ ಕುರಿಗಾಹಿ ಮೇಲೆ ನರಿ ದಾಳಿ ನಡೆಸಿ, ಗಾಯಗೊಳಿಸಿದೆ. ಎರಡನೇ ಸಲ ಎರಗಿದ್ದರಿಂದ ಪ್ರಾಣ ಉಳಿಸಿಕೊಳ್ಳಲು ಗಾಯಗೊಂಡ ವ್ಯಕ್ತಿ ನರಿಯನ್ನು ಹೊಡೆದು ಸಾಯಿಸಿದ್ದಾನೆ. ಯಮುನಪ್ಪ (28) ಗಾಯಾಳು. ಉಜ್ಜಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದಿನಂತೆ ಕುರಿಹಟ್ಟಿಗೆ ಹೋಗುವಾಗ ಪೊದೆಯಲ್ಲಿ ಅಡಗಿದ್ದ ನರಿ ದಾಳಿ ಮಾಡಿ ಕೈ, ಮುಂಗೈ ಕಚ್ಚಿದೆ. ಇದರಿಂದ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಮತ್ತೆ ದಾಳಿ ಮಾಡಿದ್ದರಿಂದ ಯುಮುನಪ್ಪ ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net