

ಕೊಟ್ಟೂರು: ಪ್ರತಿಭಾ ಕಾರಂಜಿಗಳಿಂದ ಸಾಂಸ್ಕೃತಿಕ ಮೌಲ್ಯಗಳು ಹೆಚ್ಚುತ್ತವೆ ಎಂದು ಸರ್ಕಾರಿ ಪ್ರೌಢ ಶಾಲೆ ಉಪಪ್ರಾಚಾರ್ಯ ಸಿ.ಬಸವರಾಜ ಹೇಳಿದರು.
ಮಹದೇವ ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ ಗಚ್ಚಿನಮಠದ ಕ್ಲಸ್ಟರ್ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಉದ್ದೇಶಿಸಿ ಮಾತನಾಡಿದರು. ಪ್ರತಿಭೆ ಎಲ್ಲರಲ್ಲೂ ಅಡಗಿರುತ್ತದೆ. ಅದನ್ನು ಹೊರಗೆಳೆಯುವ ಉದ್ದೇಶದಿಂದ ಇಂಥ ಕಾರ್ಯಕ್ರಮಗಳು ನಡೆಯುತ್ತವೆ ಎಂದರು. ಶಿಕ್ಷಣ ಇಲಾಖೆ ಅಧಿಕಾರಿ ಡಿ.ಆನಂದ, ಪಪಂ ಸದಸ್ಯೆ ವಿದ್ಯಾಶ್ರೀ, ಇಸಿಒಗಳಾದ ಅಜ್ಜಪ್ಪ, ನಿಂಗಪ್ಪ, ಸಿಆರ್‌ಪಿಗಳಾದ ಮಂಜುನಾಥ, ಅಜ್ಜಯ್ಯ, ಮಹದೇವ ಪ್ರೌಡ ಶಾಲೆಯ ಬಸಾಪುರ ಪಂಪಾಪತಿ, ಮರಬದ ನಾಗರಾಜ, ಶಿಕ್ಷಣ ಇಲಾಖೆಯ ಎನ್.ವಿ.ಶ್ರೀಕಾಂತ, ಮಾನಾಚಾರಿ, ಬಸವಣಪ್ಪ, ಬಸವರಾಜ, ಸುನಿತಾ ಇತರರಿದ್ದರು.