ಹೊಸಪೇಟೆ: ಕೊಟ್ಟೂರು ಶ್ರೀಗುರುಬಸವೇಶ್ವರ ಸ್ವಾಮಿಯ ರಥೋತ್ಸವ ಮತ್ತು ಜಾತ್ರೋತ್ಸವ ನಿಮಿತ್ತ ಪ್ರಯುಕ್ತ ಫೆ.21 ರ ಸಂಜೆ 6 ಗಂಟೆಯಿಂದ ಫೆ.23ರ ಸಂಜೆ 6 ಗಂಟೆವರೆಗೆ ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯಮಾರಾಟ, ಮದ್ಯ ಸಾಗಾಣಿಕೆ ಮಾಡದಂತೆ ಮದ್ಯದಂಗಡಿ ಬಾರ್ ಮತ್ತು ರೆಸ್ಟೋರೆಂಟ್ ಇತರೆ ಸ್ಥಳಗಳಲ್ಲಿ ಮದ್ಯದಂಗಡಿಗಳನ್ನು ಮುಚ್ಚುವಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್ ದಿವಾಕರ ತಿಳಿಸಿದ್ದಾರೆ.