

ಕೊಟ್ಟೂರು: ತೂಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ವಿಶ್ವಬಂಧು ಮರುಳಸಿದ್ದೇಶ್ವರ ರಥೋತ್ಸವ ಅದ್ದೂರಿಯಾಗಿ ಭಕ್ತರ ಸಮ್ಮುಖದಲ್ಲಿ ಜರುಗಿತು.
ದೇವಾಲಯದಲ್ಲಿ ಅರ್ಚಕರು ಧಾರ್ಮಿಕ ಪೂಜಾ ವಿಧಿ-ವಿಧಾನಗಳನ್ನು ಪೂರೈಸಿದ ನಂತರ ಸ್ವಾಮಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಸಕಲ ಮಂಗಲವಾದ್ಯಗಳ ಮೂಲಕ ರಥದ ಸುತ್ತ ಪ್ರದಕ್ಷಿಣೆ ಹಾಕಿ, ರಥವೇರುತ್ತಿದ್ದಂತೆ ಭಕ್ತರು ಜಯಘೋಷ ಕೂಗಿದರು. ರಥ ಸಾಗುತ್ತಿದ್ದಂತೆ ಭಕ್ತರು ಬಾಳೆ ಹಣ್ಣು, ಉತ್ತತ್ತಿ. ದವನ ತೂರಿ ನಮಿಸಿದರು.
ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಫಾಲ್ಗೊಂಡಿದ್ದರು. ರಥೋತ್ಸವಕ್ಕೂ ಮುನ್ನ ನಡೆದ ಪಟಾಕ್ಷಿ (ದೇವರ ಧ್ವಜ)ಹರಾಜಿನಲ್ಲಿ ಉಜ್ಜಪ್ಳ ಚನ್ನಕೇಶನಗೌಡ 1.40.101 ರೂ.ಗೆ ಪಡೆದುಕೊಂಡರು.