ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು; 31 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 14.50 ಲಕ್ಷ ರೂ. ಕಳವು

crime
Published on

ಕೊಟ್ಟೂರು: ಪಟ್ಟಣದ ರೇಣುಕಾ ಬಡಾವಣೆ ನಿವಾಸಿ, ಕಾಳು-ಕಡಿ ವ್ಯಾಪಾರಿ ಸುರೇಶ ಮನೆಯಲ್ಲಿ 31,52,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 14,57,000 ರೂ. ನಗದು ದೋಚಲಾಗಿದೆ. ಈ ಕಳವು ಶನಿವಾರ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮನೆಯಯವರು ಊರಲ್ಲಿ ಇಲ್ಲದ್ದರಿಂದ ಸೋಮವಾರ ಹಾಲಿನವನು ನೋಡಿದ ಮೇಲೆ ಪ್ರಕರಣ ಬಯಲಾಗಿದೆ.

ವಿಷಯ ತಿಳಿದು ಊರಿಗೆ ವಾಪಸಾದ ಸುರೇಶ, ದೂರು ನೀಡಿದ್ದಾರೆ. ಕ್ರೈಂ ಸಬ್ ಇನ್‌ಸ್ಪೆಕ್ಟರ್ ವಡಕಪ್ಪನವರ್ ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಿಪಿಐ ಮುರುಗೇಶ, ಡಿವೈಎಸ್ಪಿ ಹಾಲಮೂರ್ತಿ ರಾವ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡ ಪರಿಶೀಲನೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net