

ಕೊಟ್ಟೂರು: ಪಟ್ಟಣದ ಹಿರೇಮಠದ ಆವರಣದಲ್ಲಿ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯ ಶನಿವಾರ ನಡೆದಿದ್ದು, 61.13 ಲಕ್ಷ ರೂ. ಸಂಗ್ರಹವಾಗಿದೆ.
ಮಾರ್ಚ್‌ನಿಂದ ಸೆಪ್ಟೆಂಬರ್ ತನಕದ ಆರು ತಾತ್ಕಾಲಿಕ ಹುಂಡಿಗಳಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆ ಎಣಿಸಲಾಯಿತು. ಪೊಲೀಸರು, ಬ್ಯಾಂಕ್ ಅಧಿಕಾರಿಗಳು, ಇಲಾಖೆ ಅಧಿಕಾರಿಗಳು ಹಾಗೂ ಪಟ್ಟಣದ ಗಣ್ಯರು ಸಮ್ಮುಖ, ಸಿ.ಸಿ. ಕ್ಯಾಮರಾ ಕಣ್ಗಾವಲಿನಲ್ಲಿ ಹಣ ಎಣಿಕೆ ಮಾಡಲಾಯಿತು ಎಂದು ಎಂದು ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಗಂಗಾಧರಪ್ಪ ತಿಳಿಸಿದರು.
ಮಠದ ಇಒ ಬಿ.ಎಂ.ಕೃಷ್ಣಪ್ಪ, ಪ್ರಧಾನ ಧರ್ಮಕರ್ತ ಸಿ.ಎಚ್.ಎಂ.ಗಂಗಾಧರಯ್ಯ, ಮುಜರಾಯಿ ಪರಿವೀಕ್ಷಕ ಎಚ್.ಕೆ. ಮಲ್ಲಪ್ಪ, ಚೇತನ ಕುಮಾರ್, ಪಿಎಸ್‌ಐ ಗೀತಾಂಜಲಿ ಹಾಗೂ ಕೊಟ್ರಬಸಪ್ಪ, ಅನಿಲ್ ಕುಮಾರ್, ಪ್ರೇಮಾನಂದ ಗೌಡ, ಕೆ.ಎಸ್. ನಾಗರಾಜ್ ಗೌಡ, ಕೆ.ಸಿದ್ದನಗೌಡ ಇತರರಿದ್ದರು.