

ಕೊಟ್ಟೂರು: ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭಾನುವಾರ ಸಂಜೆ 4.56 ನಿಮಿಷಕ್ಕೆ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಹೀರೆಮಠದಿಂದ ನಾಲ್ಕು ಗಂಟೆಗೆ ಧಾರ್ಮಿಕ ವಿಧಿ-ವಿಧಾನಗಳನ್ನು ಮುಗಿಸಿ ಮೆರವಣಿಗೆಯಲ್ಲಿ ಹೊರಟ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಮೂರ್ತಿ, ಹರಿಜನ ಮಹಿಳೆಯಿಂದ ಆರತಿ ಸ್ವೀಕರಿಸಿ, ನೇರವಾಗಿ ರಥವೇರಿತು.
ಕರೊನಾ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ವಿಶೇಷ ಬಸ್‌ಗಳ ಸಂಚಾರ ರದ್ದು ಪಡಿಸಿತ್ತು. ಜತೆಗೆ ಪಾದಯಾತ್ರಿಗಳ ಪಟ್ಟಣ ಪ್ರವೇಶವನ್ನೂ ನಿರ್ಬಂಧಿಸಿತ್ತು. ಆದರೆ, ಇವೆಲ್ಲವನ್ನೂ ಮೀರಿ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಆಗಮಿಸಿ, ಶ್ರೀ ಕೊಟ್ಟೂರೇಶ್ವರ ಸ್ವಾಮಿ ದರುಶನ ಪಡೆದರು.