ಏಳು ದ್ವಿಚಕ್ರ ವಾಹನಗಳ ಕದ್ದವನ ಬಂಧನ

Kottur Stolen Arrestend
ವಶಕ್ಕೆ ಪಡೆದ ಬೈಕ್‌ಗಳೊಂದಿಗೆ ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಪಿಎಸ್‌ಐ ಗೀತಾಂಜಲಿ ಸಿಂಧೆ, ಸಿಬ್ಬಂದಿ ಎಚ್.ಬಸವರಾಜ್, ವೀರೇಶ, ಶಶಿಧರ, ನಾಗಪ್ಪ, ಯು.ಕೊಟ್ರಗೌಡ ಇದ್ದಾರೆ.
Published on

ಕೊಟ್ಟೂರು: ಬೈಕ್‌ಗಳನ್ನು ಕದಿಯುತ್ತಿದ್ದ ಕಳ್ಳನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ದೂಪದಹಳ್ಳಿ ಕೆ.ಸಂತೋಷ (31) ಬಂಧಿತ.

ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರೆ ಮಾರ್ಗದರ್ಶನದೊಂದಿಗೆ ಸಿಪಿಐ ಟಿ.ವೆಂಕಟಸ್ವಾಮಿ ನೇತೃತ್ವದಲ್ಲಿ ಪಿಎಸ್‌ಐ ಗೀತಾಂಜಲಿ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಜಿಲ್ಲೆಯಷ್ಟೇ ಅಲ್ಲದೆ ದಾವಣಗೆರೆಯಲ್ಲಿ ಒಂದು, ತುಮಕೂರು ಜಿಲ್ಲೆಯಲ್ಲಿ ಕದ್ದಿರುವ ಎರಡು ಬೈಕ್ ಸೇರಿ ಏಳು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಎಚ್. ಬಸವರಾಜ್, ವೀರೇಶ, ಶಶಿಧರ, ನಾಗಪ್ಪ, ಯು.ಕೊಟ್ರಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net