

ಕೊಟ್ಟೂರು: ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಶಾಸಕ ಎಸ್.ಭೀಮಾನಾಯ್ಕ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ರೇಣುಕಾ ಟಾಕೀಸ್ ಬಳಿ ರಸ್ತೆ ವಿಸ್ತರಣೆ ಕಾಮಗಾರಿಗೆ ಸಾರ್ವಜನಿಕರು ಸಮ್ಮತಿ ಸೂಚಿಸಿದರು.
ಹಳೇ ನಾಡಕಚೇರಿಯಿಂದ ಉಜ್ಜಿನಿ ಸರ್ಕಲ್ ಮಾರ್ಗವಾಗಿ ಸೋಮಲಿಂಗೇಶ್ವರ ದೇವಸ್ಥಾನದವರೆಗೆ ರಸ್ತೆ ವಿಸ್ತರಣೆ ನಡೆಯಲಿದೆ. ರಸ್ತೆ ವಿಸ್ತರಣೆ ವೇಳೆ ಮನೆ ಕಳೆದುಕೊಂಡವರಿಗೆ ಆದ್ಯತೆ ಮೇರೆಗೆ ಪಪಂಯಿಂದ ಮನೆ ಮಂಜೂರು ಮಾಡಿಸಿಕೊಡಲಾಗುವುದು ಎಂದು ಶಾಸಕ ಭೀಮಾನಾಯ್ಕ ಭರವಸೆ ನೀಡಿದರು. ರಸ್ತೆ ಮಧ್ಯಭಾಗದಿಂದ ಎರಡು ಕಡೆ 27ಅಡಿ ರಸ್ತೆ ವಿಸ್ತರಣೆಗೆ ಮನೆ ಮಾಲೀಕರು ಒಪ್ಪಿಗೆ ಸೂಚಿಸಿದರು. ನ.27ರಂದು ರಸ್ತೆ ವಿಸ್ತರಣೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದ ಶಾಸಕರು, ಮನೆಗಳ ತೆರವಿಗೆ ಮೂರು ವಾರಗಳ ಗಡುವು ನೀಡಿದರು.
ಚಾನುಕೋಟಿ ಮಠದ ಸಿದ್ಧಲಿಂಗ ಸ್ವಾಮೀಜಿ, ಕಲಾ ಕೇಂದ್ರದ ಅಧ್ಯಕ್ಷ ಸತ್ಯಪ್ರಕಾಶ, ಜಿಪಂ ಸದಸ್ಯ ಹರ್ಷವರ್ಧನ, ಮುಟುಗನಹಳ್ಳಿ ಕೊಟ್ರೇಶ, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಸುಧಾಕರಗೌಡ, ಡಾ.ಬಿ.ಸಿ.ಮೂಗಪ್ಪ, ಪಪಂ ಮಾಜಿ ಅಧ್ಯಕ್ಷ ಎಚ್.ಆರ್.ಕೊಟ್ರೇಶ, ಪಪಂ ಉಪಾಧ್ಯಕ್ಷ ಶಫೀಉಲ್ಲಾ, ಮಾಜಿ ಉಪಾಧ್ಯಕ್ಷ ಗುರುಶಾಂತಪ್ಪ, ಎಇಇ ರವಿಚಂದ್ರ, ಸಹಾಯಕ ಇಂಜಿನಿಯರ್ ಸೋಮಶೇಖರ್ ಇದ್ದರು.