ಕೊಟ್ಟೂರಿನಲ್ಲಿ ನೋಟ್‌ಬುಕ್ ವಿತರಣೆ - ಪುನೀತ್ ರಾಜಕುಮಾರ್ 50ನೇ ಜನ್ಮದಿನ

kottur-1
ಕೊಟ್ಟೂರಿನಲ್ಲಿ ನಟಪುನೀತ್ ರಾಜಕುಮಾರ್ ಅಭಿಮಾನಿಗಳು ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದರು. ರಾಂಪುರ ಪ್ರಕಾಶ, ಕೆ.ಎಂ.ಗುರುಸ್ವಾಮಿ, ಬಿ.ಉಚ್ಚೆಂಗಪ್ಪ, ಗಜಾಪುರ ರಾಜು, ಎಚ್.ವೀರೇಶ ಇದ್ದರು.
Published on

ಕೊಟ್ಟೂರು: ಪಟ್ಟಣದಲ್ಲಿ 17 ಕೆ.ಜಿ. ಕೇಕ್ ಕತ್ತರಿಸಿ ನಟ ಪುನೀತ್ ರಾಜಕುಮಾರ್ ಅವರ 50ನೇ ಜನ್ಮದಿನವನ್ನು ಅಭಿಮಾನಿಗಳು ಸೋಮವಾರ ಆಚರಿಸಿದರು.

ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹ್ಯಾಳ್ಯಾ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆಯ ಪಟ್ಟಣ ಪಂಚಾಯಿತಿ ಹತ್ತಿರದ ಸರ್ಕಾರಿ ಪ್ರಾಥಮಿಕ ಶಾಲೆ, ಗಂಗೋತ್ರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುನೀತ್ ರಾಜಕುಮಾರ್ ಭಾವಚಿತ್ರವಿರುವ ನೋಟ್‌ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಶಿಕ್ಷಕರು ಮತ್ತು ಪೊಲೀಸರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ರಾಂಪುರ ಪ್ರಕಾಶ, ಕೆ.ಎಂ.ಗುರುಸ್ವಾಮಿ, ಬಿ.ಉಚ್ಚೆಂಗಪ್ಪ, ಗಜಾಪುರ ರಾಜು, ಎಚ್. ವೀರೇಶ, ಎಲ್.ಕೊಟ್ರೇಶ, ಬಿ.ಕೊಟ್ರೇಶ, ಅಪ್ಪಣ್ಣ, ಗೀರೀಶ, ನಿಂಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net