

ಕೊಟ್ಟೂರು: ತಾಲೂಕಿನ 14 ಗ್ರಾಪಂಗಳ ಪ್ರತಿ ಹಳ್ಳಿಯಲ್ಲೂ ಈ ತಿಂಗಳಾಂತ್ಯವರೆಗೆ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಒ ಪರಮೇಶ್ವರಪ್ಪ ಹೇಳಿದರು. ತಾಪಂ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಇದೊಂದು ವಿನೂತನ ಅಭಿಯಾನಯಾಗಿದ್ದು, ಮೊದಲ ಬಾರಿಗೆ ತಾಲೂಕಿನಲ್ಲಿ ಆಯೋಜಿಸಲಾಗಿದೆ. ಈಗಾಗಲೇ ರಾಂಪುರ ಗ್ರಾಪಂ ವ್ಯಾಪ್ತಿಯ ಸುಂಕದಕಲ್ಲು ಗ್ರಾಮದಲ್ಲಿ ಆರಂಭಗೊಂಡಿದೆ ಎಂದರು.
ಹಳ್ಳಿಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲಿಚಿಂಗ್ ಫೌಡರ್ ಹಾಕುವುದು. ದೇವಾಲಯ, ಅಂಗನವಾಡಿ, ಶಾಲೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು. ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛತೆ ಮಾಡುವುದು ಅಭಿಯಾನದ ಉದ್ದೇಶವಾಗಿದೆ ಎಂದರು.