ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

281222 Halya Village Rangoli Price
ಕೊಟ್ಟೂರು ತಾಲೂಕು ಹ್ಯಾಳ್ಯಾ ಗ್ರಾಮದಲ್ಲಿ ಗೀತಾ ಭೀಮಾನಾಯ್ಕ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಧ್ಯಕ್ಷೆ ಗೀತಾ ಭೀಮಾನಾಯ್ಕ ಬಹುಮಾನ ವಿತರಿಸಿದರು.
Published on

ಕೊಟ್ಟೂರು: ಹಗರಿಬೊಮ್ಮನಹಳ್ಳಿಯಲ್ಲಿ ಜನವರಿ 3ರಂದು ಮಾಲ್ವಿ ಜಲಾಶಯ ತುಂಬಿರುವುದರ ವಿಜಯೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಸ್ವಾರ್ಥಕ ನಮನ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯ್ಕ ಸಿದ್ದರಾಮಯ್ಯ ಆಗಮಿಸಲಿದ್ದು, ಅಂದು ಕ್ಷೇತ್ರದ 15 ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೀತಾ ಭೀಮಾನಾಯ್ಕ ಅಭಿಮಾನಿ ಬಳಗದ ಅಧ್ಯಕ್ಷೆ ಗೀತಾ ಭೀಮಾನಾಯ್ಕ ಹೇಳಿದರು.

ಕೊಟ್ಟೂರು ತಾಲೂಕಿನ ಸಂಕ್ರಾಂತಿ ಸೊಬಗು ಅಂಗವಾಗಿ ಹ್ಯಾಳ್ಯಾ ಗ್ರಾಮದಲ್ಲಿ ಮಂಗಳವಾರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಮಹಿಳೆಯರಿಗೆ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಈಗಾಗಲೇ 28 ಗ್ರಾಮ ಪಂಚಾಯಿತಿಗಳಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು. ಮಹಿಳೆಯರಿಗೆ ಜನವರಿ 12ರಂದು ಹಗರಿಬೊಮ್ಮನಹಳ್ಳಿಯಲ್ಲಿ ಮಹಿಳಾ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುವುದು. ಕವಿತಾ ವಿಜಯಕುಮಾರ್, ಹ್ಯಾಳ್ಯಾದ ಮಂಜುನಾಥ್, ಮೋತಿಕಲ್ ತಾಂಡಾದ ಚಂದ್ರಾನಾಯ್ಕ ಮಾತನಾಡಿದರು.

ಬಡಿಗೇರ್ ಕೊಟ್ರೇಶ, ಗ್ರಾಪಂ ಉಪಾಧ್ಯಕ್ಷೆ ಶಿಲ್ಪ ಸಿದ್ದೇಶ, ಪುಷ್ಪ ಕೊಟ್ರೇಶ ನಾಣಿಕೆರೆ, ಸಿದ್ದೇಶ ಪೂಜಾರ್, ಕವಿತಾ ಅಲ್ದಾಳ್, ಗಂಗಮ್ಮ ಪವಾಡಿ ಹನುಮಂತಪ್ಪ, ಮೌನಬಾಯಿ, ಸವಿತಾ, ಶಾಹೀರಾಬಾನು, ನಿರೂಪಣೆ ಯಶೋದಮ್ಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net