ಕೊಟ್ಟೂರಲ್ಲಿ 106 ಲಕ್ಷ ರೂ. ಕಾಮಗಾರಿಗಳಿಗೆ ಚಾಲನೆ

march 29 kottur 01
Published on

ಕೊಟ್ಟೂರು: ಶಾಸಕ ಭೀಮಾನಾಯ್ಕ ಪಟ್ಟಣದಲ್ಲಿ ನಗರೋತ್ಥಾನ ಹಂತ ನಾಲ್ಕ ಯೋಜನೆಯಡಿ 106.38 ಲಕ್ಷ ರೂ. ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿದರು.

ಪಟ್ಟಣದ ಹ್ಯಾಳ್ಯಾ ರಸ್ತೆಯ ಒಳಚರಂಡಿ ಮುಂದಿವರಿದ ಕಾಮಗಾರಿ, 6ನೇ ವಾರ್ಡ್‌ನಲ್ಲಿ ಮಳೆ ನೀರು ಚರಂಡಿ ಕಾಮಗಾರಿ, ಇಟಗಿ ರಸ್ತೆಯಿಂದ ನಾಗೇನಹಳ್ಳಿ ತಿಪ್ಪಮ್ಮ ಮನೆ ವರೆಗೆ ರಸ್ತೆ ನಿರ್ಮಾಣ, 14ನೇ ವಾರ್ಡ್‌ನಲ್ಲಿ ತೇರು ಬಯಲು ಬಸವೇಶ್ವರ ದೇವಸ್ಥಾನ ಮುಂಭಾಗ ರಸ್ತೆಗೆ ಇಂಟರ್ ಲಾಕಿಂಗ್ ಪೇವರ್ ಅಳವಡಿಕೆ, 11ನೇ ವಾರ್ಡ್‌ನಲ್ಲಿ ಸಿಸಿ ಚರಂಡಿ ನಿರ್ಮಾಣ. ಜೆ.ಸಿ. ನಗರ ಮುಖ್ಯರಸ್ತೆಗೆ ಡಾಂಬರೀಕರಣ. ಚೌಡಮ್ಮ ಗುಡಿಮುಂದೆ ರಸ್ತೆ ನಿರ್ಮಾಣ ಸೇರಿ ಒಟ್ಟು ಆರು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಶಫಿ, ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾರುಕೇಶ, ಆರ್.ಎಂ. ಗುರು, ಬಡಿಗೇರ್ ಕೊಟ್ರೇಶ, ಅಡಕೆ ಮಂಜುನಾಥ, ಆಚೆಮನೆ ಮಲ್ಲಿಕಾರ್ಜುನ, ಪಪಂ ಮುಖ್ಯಾಧಿಕಾರಿ ನಸುರುಲ್ಲಾ, ಲೋಕೋಪಯೋಗಿ ಇಲಾಖೆೆ ಖಾಜಾಸಾಹೇಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net