ರಾಗಿಗೆ ಬೆಂಬಲ ಬೆಲೆ ನೀಡಲಿ

Kottur formars appele
ಕೊಟ್ಟೂರಿನಲ್ಲಿ ಗ್ರೇಡ್-2 ತಹಸೀಲ್ದಾರ್ ಪ್ರತಿಭಾಗೆ ರೈತ ಸಂಘದ ಉಪಾಧ್ಯಕ್ಷ ಎನ್.ಭರಮಪ್ಪ ಮನವಿ ಸಲ್ಲಿಸಿದರು. ಪ್ರಮುಖರಾದ ಎನ್.ನೀಲಕಂಠನಗೌಡ, ಎ.ಜನಾರ್ದನ ಹರಾಳು, ಎನ್.ಸಿದ್ದಪ್ಪ, ಪರುಶಪ್ಪ ಇತರರಿದ್ದರು.
Published on

ಕೊಟ್ಟೂರು: ಹಿಂಗಾರು ಹಂಗಾಮಿನ ರಾಗಿ ಫಸಲಿಗೆ ಬೆಂಬಲ ಬೆಲೆ ನೀಡಬೇಕೆಂದು ರಾಜ್ಯ ರೈತ ಸಂಘದ (ಬಸವರಾಜಪ್ಪ ಬಣ) ಉಪಾಧ್ಯಕ್ಷ ಎನ್.ಭರಮಪ್ಪ ಒತ್ತಾಯಿಸಿದರು.

ಈ ಕುರಿತು ಗುರುವಾರ ಗ್ರೇಡ್-2 ತಹಸೀಲ್ದಾರ್ ಪ್ರತಿಭಾಗೆ ಮನವಿ ಸಲ್ಲಿಸಿ ಮಾತನಾಡಿದರು. ಸರ್ಕಾರ ಮುಂಗಾರು ಹಂಗಾಮಿನ ರಾಗಿ ಫಸಲಿಗೆ ಮಾತ್ರ ಬೆಂಬಲ ಬೆಲೆ ಪ್ರಕಟಿಸಿದೆ. ಇದರಿಂದ ರೈತರಲ್ಲಿ ತಾರತಮ್ಯ ಮಾಡಿದಂತಾಗುತ್ತದೆ. ಈ ಭಾಗದಲ್ಲಿ ಹಿಂಗಾರಿನಲ್ಲೂ ರಾಗಿ ಬೆಳೆಯುತ್ತಾರೆ. ಆದ್ದರಿಂದ ಹಿಂಗಾರು ಹಂಗಾಮಿನ ರಾಗಿಗೆ ಬೆಂಬಲ ಬೆಲೆ ಘೋಷಿಸಬೇಕು. ಕೇಂದ್ರ ಸರ್ಕಾರ ರೈತ ವಿರೋಧಿ ಮೂರು ಕಾಯ್ದೆ ಜಾರಿಗೊಳಿಸಿದ್ದು, ಕೂಡಲೇ ಈ ಕಾಯ್ದೆಗಳನ್ನು ಹಿಂಪಡೆಯಬೇಕು. ದೆಹಲಿ ಹೊರವಲಯದಲ್ಲಿ ಮುಷ್ಕರ ನಡೆಸಿರುವ ರೈತರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net