ಸ್ಮಶಾನಕ್ಕೆ ಕಾರ್ಮಿಕರ ನೇಮಕ ಮಾಡಿ; ಕೊಟ್ಟೂರು ತಾಲೂಕು ಮಸಣ ಕಾರ್ಮಿಕ ಸಂಘ ಒತ್ತಾಯ

29082022 Kottur protest
Published on

ಚಿರಬಿ ಗ್ರಾಪಂ ಪಿಡಿಒಗೆ ಮನವಿ

ಕೊಟ್ಟೂರು: ಸರ್ಕಾರ ಆದೇಶದಂತೆ ಚಿರಬಿ ಗ್ರಾಪಂಗೆ ಸ್ಮಶಾನ ಕಾರ್ಮಿಕರನ್ನು ನೇಮಿಸುವಂತೆ ತಾಲೂಕು ಮಸಣ ಕಾರ್ಮಿಕ ಸಂಘ ಒತ್ತಾಯಿಸಿದೆ.

ಸ್ಮಶಾನದಿಂದ ಮೆರವಣೆಗೆ ಮೂಲಕ ಆಗಮಿಸಿದ ಸಂಘದ ಪದಾಧಿಕಾರಿಗಳು ಗ್ರಾಪಂ ಪಿಡಿಒ ಗಂಗಾಧರಗೆ ಸೋಮವಾರ ಮನವಿ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಜಾಗಟಗೆರೆ ರುದ್ರೇಶ ಮಾತನಾಡಿ, 2021ರಲ್ಲಿ ಸರ್ಕಾರ ಸ್ಮಶಾನಕ್ಕೊಬ್ಬರಂತೆ ಕಾರ್ಮಿಕರು ಹಾಗೂ ಇಬ್ಬರು ಸಹಾಯಕರನ್ನು ನೇಮಿಸುವಂತೆ ಆದೇಶಿಸಿದೆ. ಆದರೆ, ಗ್ರಾಪಂ ಯಾರನ್ನೂ ನೇಮಿಸಿಲ್ಲ. ತಾಲೂಕಿನ ಪ್ರತಿಯೊಂದು ಗ್ರಾಪಂಗೆ ಸಂಘದಿಂದ ಮನವಿ ಸಲ್ಲಿಸಿ ನಂತರ ತಾಪಂ ಕಚೇರಿ ಮುಷ್ಕರ ನಡೆಸುವುದಾಗಿ ಹೇಳಿದರು.

ಪ್ರತಿ ಗ್ರಾಪಂಗೆ ಕಸ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಅಲ್ಲಿ ಎಸ್ಸಿ ಮಹಿಳೆಯರನ್ನು ಹಾಗೂ ವಿಮುಕ್ತ ದೇವದಾಸಿ ಮಹಿಳೆಯರನ್ನು ನೇಮಿಸಬೇಕು. ಚಾಲನಾ ಪರವಾನಗಿಯನ್ನು ಪಂಚಾಯಿತಿಯವರೇ ಮಾಡಿಸಿಕೊಡಬೇಕೆಂದು ಸರ್ಕಾರ ಆದೇಶ ಮಾಡಿದೆ ಎಂದರು. ಗಂಗಮ್ಮನಹಳ್ಳಿ, ಚಿರಬಿ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net