ಕೊಟ್ಟೂರಿನಲ್ಲಿ ಮೆಕ್ಕೆಜೋಳ ಜಮೀನು ಮೇಲೆ ಕಾಡು ಹಂದಿಗಳ ದಾಳಿ, ನಾಲ್ಕು ಎಕರೆ ಬೆಳೆ ನಾಶ

180620 Kotturu Wild Pig Attat at land
Published on

ಕೊಟ್ಟೂರು: ತಾಲೂಕಿನ ಶಿರಬಿ ಸಮೀಪದ ಎಂ.ಎಂ.ಜೆ.ರುದ್ರಮುನಿ ಎಂಬುವವರ ಜಮೀನಿನಲ್ಲಿ ಬುಧವಾರ ರಾತ್ರಿ ಕಾಡು ಹಂದಿಗಳ ಹಿಂಡು ದಾಳಿ ನಡೆಸಿ ನಾಲ್ಕು ಎಕರೆ ಮೆಕ್ಕೆಜೋಳದ ಬೀಜವನ್ನು ತಿಂದು ಹಾಕಿವೆ. ಮೂರು ದಿನಗಳ ಹಿಂದೆ ಬಿತ್ತನೆ ಮಾಡಲಾಗಿತ್ತು. ಮೊಳಕೆಯಾಗುವ ಮುನ್ನವೇ ಕಾಡು ಹಂದಿಗಳು ತಿಂದು ಹಾಕಿವೆ. ಕಾಡಿನಲ್ಲಿ ಆಹಾರದ ಕೊರತೆ ಕಾರಣ ಬಿತ್ತನೆ ಸಂದರ್ಭದಲ್ಲಿ ಹಂದಿಗಳು ಹೊಲಗಳಲ್ಲಿ ನುಗ್ಗುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ರಾತ್ರಿ ವೇಳೆ ಕಾಯಲು ಹೋದವರ ಮೇಲೂ ಕಾಡು ಹಂದಿಗಳು ದಾಳಿ ಮಾಡುತ್ತಿರುವುದರಿಂದ ರೈತರು ಭಯಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net