ಕೊಟ್ಟೂರಿನಲ್ಲಿ ಲಾಟರಿ ಎತ್ತಿ ರೈತರಿಗೆ ತಾಡಪಾಲ್ ವಿತರಿಸಿದ ಸಂಸದ ವೈ.ದೇವೇಂದ್ರಪ್ಪ

21022021 kottur lottory mp devendrappa
Published on

ಕೊಟ್ಟೂರು: ದೇಶದ ಬೆನ್ನೆಲುಬಾದ ರೈತರ ಬೇಡಿಕೆಗೆ ಅನುಗುಣವಾಗಿ ತಾಡಪಾಲ್‌ಗಳನ್ನು ರೈತ ಸಂಪರ್ಕ ಕೇಂದ್ರಕ್ಕೆ ಕಳಿಸುವಂತೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ಗೆ ಸಂಸದ ವೈ.ದೇವೇಂದ್ರಪ್ಪ ಸೂಚಿಸಿದರು.

ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಲಾಟರಿ ಎತ್ತಿ ರೈತರಿಗೆ ತಾಡಪಾಲ್ ವಿತರಿಸಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಕರೆ ಮಾಡಿ ಮಾತನಾಡಿರು. ರೈತರಿಗೆ ತಾಡಪಾಲ್ ತೀರ ಅವಶ್ಯಕತೆ ಇದೆ. ರೈತರು 900 ಅರ್ಜಿಗಳನ್ನು ಸಲ್ಲಿಸಿದ್ದು, ಕೇವಲ 400 ಕಳಿಸಿದ್ದೀರಿ. ಇದು ಸರಿಯಲ್ಲ. ಬೇಡಿಕೆಗೆ ತಕ್ಕಂತೆ ಪೂರೈಸಬೇಕೆಂದು ಸೂಚನೆ ನೀಡಿದರು. ರೈತ ಸಂಘದ ಮುಖಂಡ ಚಪ್ಪರದಹಳ್ಳಿ ಕೊಟ್ರೇಶಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net